ಪ್ರಚೋದನಕಾರಿ ಪೋಸ್ಟ್: ನಾಲ್ಕು ಇನ್‌ಸ್ಟಾಗ್ರಾಂ ಮತ್ತು ಒಂದು ಫೇಸ್‌ಬುಕ್ ಪೇಜ್ ರದ್ದು

ಪ್ರಚೋದನಕಾರಿ ಪೋಸ್ಟ್: ನಾಲ್ಕು ಇನ್‌ಸ್ಟಾಗ್ರಾಂ ಮತ್ತು ಒಂದು ಫೇಸ್‌ಬುಕ್ ಪೇಜ್ ರದ್ದು

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ ನಾಲ್ಕು ಇನ್‌ಸ್ಟಾಗ್ರಾಂ ಮತ್ತು ಒಂದು ಫೇಸ್‌ಬುಕ್ ಪೇಜ್ ರದ್ದು (ಡಿಆಕ್ಟಿವ್) ಮಾಡಲಾಗಿದೆ.

‘ವಿಎಚ್‌ಪಿ ಬಜರಂಗದಳ ಅಶೋಕನಗರ’ ಮತ್ತು ‘ಶಂಖನಾದ’ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಉರ್ವ ಪೊಲೀಸ್ ಠಾಣೆ, ‘ಡಿಜೆ ಭರತ್ 2008’ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ, ‘ಕರಾವಳಿ ಅಫೀಶಿಯಲ್’ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಪಾಂಡೇಶ್ವರ ಠಾಣೆ ಮತ್ತು ‘ಆಶಿಕ್ ಮೈಕಾಲ’ ಫೇಸ್‌ಬುಕ್ ಪೇಜ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಸೆನ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಗಿತ್ತು. ಲಾ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ಜತೆ ಈ ಬಗ್ಗೆ ಪತ್ರವ್ಯವಹಾರ ಕೈಗೊಂಡು, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article