
ಪಟ್ಲ ದಶಮ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ದಶಮಾನೋತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಕುಣಿತ ಭಜನಾ ಸ್ಪರ್ಧಾ ನಿಯಮ:
ಸಾಂಪ್ರದಾಯಿಕ ಕುಣಿತ ಭಜನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರತಿಯೊಂದು ತಂಡಕ್ಕೂ 15 ನಿಮಿಷಗಳ ಕಾಲಾವಕಾಶ ನೀಡಲಾಗುವುದು.
ಒಂದು ತಂಡದಲ್ಲಿ ಕನಿಷ್ಠ 12 ಮಂದಿ ಮತ್ತು ಹಿಮ್ಮೇಳ ಸೇರಿ ಗರಿಷ್ಠ 16 ಮಂದಿ ಭಾಗವಹಿಸುವುದು.
ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ವಿಭಾಗ ಇರುವುದಿಲ್ಲ.
ಗಣಪತಿ ಸ್ತುತಿಯಿಂದ ಮಂಗಳದವರೆಗೆ ಒಬ್ಬ ಭಜಕ ಒಂದು ಭಜನೆಯನ್ನು ಮಾತ್ರ ಹಾಡಬಹುದು.
ಮೊದಲ 20 ತಂಡಗಳಿಗೆ ಮಾತ್ರ ಅವಕಾಶ.
ಸ್ಪರ್ಧೆಯ ಕ್ರಮಾಂಕವನ್ನು ಸ್ಪರ್ಧೆಯ ದಿನ, ಸ್ಥಳದಲ್ಲಿಯೇ ತೆಗೆಯಲಾಗುವುದು. ಹಾಗಾಗಿ ಜೂನ್ 1 ರಂದು ಬೆಳಿಗ್ಗೆ 8 ಗಂಟೆಯ ಒಳಗೆ ಎಲ್ಲಾ ತಂಡಗಳು ಹಾಜರಿರುವುದು ಕಡ್ಡಾಯ.
ಎಲ್ಲಾ ಸ್ಪರ್ಧಿಗಳಿಗೂ ಬೆಳಗ್ಗಿನ ಉಪಾಹಾರ, ಭೋಜನದ ವ್ಯವಸ್ಥೆ ಇರುವುದು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25000 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ 20000 ಮತ್ತು ಶಾಶ್ವತ ಫಲಕ, ತೃತೀಯ 15000 ಮತ್ತು ಶಾಶ್ವತ ಫಲಕ ನೀಡಲಾಗುವುದು.
ಭಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆ ಹಾಗೂ ನಗದು ನೀಡಿ ಗೌರವಿಸಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ ವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.