
ಹೆಡ್ ಕಾನ್‌ಸ್ಟೇಬಲ್‌ಗಳ ವರ್ಗಾವಣೆ
Friday, May 30, 2025
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 7 ಮಂದಿ ಹೆಡ್ ಕಾನ್‌ಸ್ಟೇಬಲ್‌ಗಳನ್ನು ನಿರ್ಗಮನ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಗುರುವಾರ ರಾತ್ರಿ ವರ್ಗಾವಣೆಗೊಳಿಸಿರುವುದಾಗಿ ವರದಿಯಾಗಿದೆ.
ಕಂಕನಾಡಿ ನಗರ ಠಾಣೆಯ ಪ್ರೀತೇಶ್‌ರನ್ನು ಸಂಚಾರ ದಕ್ಷಿಣ ಠಾಣೆಗೆ, ಕೊಣಾಜೆ ಠಾಣೆಯ ರಾಜೇಶ್ ಕೆ.ಎನ್.ರನ್ನು ಕಂಕನಾಡಿ ನಗರ ಠಾಣೆಗೆ, ಸೆನ್ ಠಾಣೆಯ ಸತೀಶ್ ಎಂ ಮತ್ತು ರಾಜಾರಾಂ ಅವರನ್ನು ಸಿಸಿಬಿ ಠಾಣೆಗೆ, ಸಂಚಾರ ದಕ್ಷಿಣ ಠಾಣೆಯ ನಾಗರಾಜ ಮಲ್ಲಿಕಟ್ಟ ಅವರನ್ನು ಸಂಚಾರ ಪೂರ್ವ ಠಾಣೆಗೆ, ಸಿಸಿಬಿ ಠಾಣೆಯಲ್ಲಿದ್ದ ಸುಧೀರ್ ಕುಮಾರ್ ಮತ್ತು ಭೀಮಪ್ಪ ಸಿದ್ದಪ್ಪ ಉಪ್ಪರ್ ಅವರನ್ನು ಸೆನ್ ಠಾಣೆಗೆ ವರ್ಗಾಯಿಸಲಾಗಿದೆ.
ಪೊಲೀಸ್ ಕಮಿಷನರ ಅನುಪಮ್ ಅಗರ್‌ವಾಲ್ ಅವರು ಗುರುವಾರ ತನ್ನ ವರ್ಗಾವಣೆ ಆದೇಶ ಬಂದ ಬಳಿಕ ಈ 7 ಮಂದಿ ಹೆಡ್‌ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.