
ತತಕ್ಷಣವೇ ಇಎಸ್‌ಐ ಸೊಸೈಟಿ ರಚಿಸಿ, ಅಥವಾ ಇಎಸ್‌ಐಸಿಗೆ ಹಸ್ತಾಂತರಿಸಿ: ಕ್ಯಾ. ಚೌಟ ರಾಜ್ಯ ಸರ್ಕಾರಕ್ಕೆ ಒತ್ತಾಯ
Friday, May 30, 2025
ಮಂಗಳೂರು: ತಮ್ಮ ಮನವಿಗೆ ಸ್ಪಂದಿಸಿ ದೆಹಲಿಯ ಇಎಸ್‌ಐಸಿ ಅಧಿಕಾರಿಗಳ ತಂಡವು ಮಂಗಳೂರಿನ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿರುವುದು ಬಹಳ ಖುಷಿ ತಂದಿದೆ. ಈ ತಂಡದ ಭೇಟಿಯ ಪರಿಣಾಮ, ಈ ಆಸ್ಪತ್ರೆಯಲ್ಲಿ ಚಿಕಿತ್ಸಾ ಗುಣಮಟ್ಟ ಹಾಗೂ ಮೂಲಸೌಕರ್ಯ ಹೆಚ್ಚಳವಾಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ರಾಜ್ಯದ ಇಎಸ್‌ಐ ಎಲ್ಲಾ ಚಟುವಟಿಕೆ ಸುಗಮಗೊಳಿಸಲು ಹಾಗೂ ಕೇಂದ್ರದ ಅನುದಾನ ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಕೂಡಲೇ ‘ರಾಜ್ಯ ಇಎಸ್‌ಐ ಸೊಸೈಟಿ’ಯನ್ನು ರಚನೆ ಮಾಡಬೇಕು. ಈ ಬಗ್ಗೆ ಕಾರ್ಮಿಕ ಸಚಿವರಿಗೆ ಮೂರು ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ರಾಜ್ಯದ ಲಕ್ಷಾಂತರ ಬಡವರ್ಗದ ಕಾರ್ಮಿಕ, ನೌಕರರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಹಾಗೂ ಇಎಸ್‌ಐ ಆಸ್ಪತ್ರೆಗಳ ಸುಧಾರಣೆಗೆ ಈ ಕೂಡಲೇ ‘ರಾಜ್ಯ ಇಎಸ್‌ಐ ಸೊಸೈಟಿ’ಯನ್ನು ರಚನೆ ಮಾಡಬೇಕು. ಇಲ್ಲವಾದರೆ ಬಡವರ ಆರೋಗ್ಯದ ಹಿತದೃಷ್ಟಿಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿಳಂಬ ಮಾಡದೆ ಮಂಗಳೂರು ಇಎಸ್‌ಐ ಆಸ್ಪತ್ರೆಯ ನಿರ್ವಹಣೆಯನ್ನು ಇಎಸ್‌ಐಸಿ ಪ್ರಧಾನ ಕಚೇರಿಗೆ ಹಸ್ತಾಂತರಿಸಲು ಸಿದ್ದರಾಮಯ್ಯ ಸರ್ಕಾರ ತತಕ್ಷಣವೇ ಕ್ರಮ ಜರುಗಿಸಿಬೇಕು ಕ್ಯಾ. ಚೌಟ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.