
ನವೀಕೃತ ಶೋಕಮಾತೆ ಮಂದಿರ ಉದ್ಘಾಟನೆ
Saturday, May 31, 2025
ಮಂಗಳೂರು: ಕೊಡಿಯಾಲ್‌ಬೈಲ್ ಬಿಷಪ್ ಹೌಸ್‌ನಲ್ಲಿ ಹೊಸದಾಗಿ ನವೀಕರಿಸಲಾದ ‘ಅವರ್ ಲೇಡಿ ಆಫ್ ಸೋರೋವ್ಸ್’ (ಶೋಕಮಾತೆ) ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಆಶೀರ್ವಚನದೊಂದಿಗೆ ಬಲಿಪೂಜೆ ನೆರವೇರಿಸಿದರು.
ಐತಿಹಾಸಿಕ ಹಾಗೂ ಆಧ್ಯಾತ್ಮಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಶೋಕಮಾತೆಯ ಪ್ರಾರ್ಥನಾ ಮಂದಿರವನ್ನು 1857ರಲ್ಲಿ ಸ್ಥಾಪಿಸಲಾಗಿತ್ತು. 1963ರಲ್ಲಿ ಮುಂಭಾಗದ ನವೀಕರಣ ನಡೆದಿದ್ದು, ದಶಕದ ಹಿಂದೆ ನೆಲಹಾಸಿನ ಬದಲಾವಣೆ ಮಾಡಲಾಗಿತ್ತು. ಇದೀಗ ಹೊಸ ವಾಸ್ತುಶಿಲ್ಪದೊಂದಿಗೆ ಹೊಸ ಮುಂಭಾಗ, ಛಾವಣಿ, ಗೋಡೆಗಳ ಪ್ಲಾಸ್ಟರಿಂಗ್, ಹೊಸ ಚಿತ್ರಕಲೆ, ವಿದ್ಯುದೀಕರಣ, ಧ್ವನಿ ವ್ಯವಸ್ಥೆ ಸೇರಿ ಅಗತ್ಯ ನವೀಕರಣ ಮಾಡಲಾಗಿದೆ.
ಮ್ಯಾಕ್ಸಿಂ ಎಲ್. ನೊರೊನ್ನಾ, ವಿಕಾರ್ ಜನರಲ್ ಡಾ. ವಿಕ್ಟರ್ ಜಾರ್ಜ್ ಡಿಸೋಜಾ, ರೆ.ಫಾ. ಜಗದೀಶ್ ಪಿಂಟೋ, ರೆ.ಫಾ. ರೂಪೇಶ್ ಮಾಡ್ತಾ, ವಂ. ಮ್ಯಾಕ್ಸಿಂ ರೊಸಾರಿಯೊ, ತ್ರಿಶನ್ ಡಿಸೋಜಾ, ವಂ. ಜೇಸನ್ ಲೋಬೋ, ವಲೇರಿಯನ್ ಡಿಸೋಜಾ, ಲೆಸ್ಲಿ ಎಪ್. ಶೆಣೈ ಸೇರಿದಂತೆ ಇತರ ಧಾರ್ಮಿಕ ಗಣ್ಯರು, ಭಗಿನಿಯರು ಉಪಸ್ಥಿತರಿದ್ದರು.