ಗೃಹಸಚಿವರು, ಉಸ್ತುವಾರಿ ಸಚಿವರಿಂದ ಮುಸ್ಲಿಮ್ ಮುಖಂಡರೊಂದಿಗೆ ಸಭೆ: ಭರತ್ ಶೆಟ್ಟಿ ಖಂಡನೆ

ಗೃಹಸಚಿವರು, ಉಸ್ತುವಾರಿ ಸಚಿವರಿಂದ ಮುಸ್ಲಿಮ್ ಮುಖಂಡರೊಂದಿಗೆ ಸಭೆ: ಭರತ್ ಶೆಟ್ಟಿ ಖಂಡನೆ


ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ಮತೀಯವಾದಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಸಾವಿನಿಂದ ಪೂರ್ತಿ ದಕ್ಷಿಣ ಕನ್ನಡ ಜಿಲ್ಲೆಯೇ ಸ್ತಬ್ದವಾಗಿತ್ತು. ಈ ನಡುವೆ ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲೆಗೆ ಆಗಮಿಸಿದ ತಕ್ಷಣ ಮುಸ್ಲಿಮ್ ಮುಖಂಡರುಗಳೊಂದಿಗೆ ಸಭೆ ನಡೆಸಿದ್ದಾರೆ.

ಹತ್ಯೆಯಾದ ಹಿಂದೂ ಕಾರ್ಯಕರ್ತನ ಸಾವಿಗೆ ನ್ಯಾಯ ನೀಡಬೇಕಾದ ಸರಕಾರವೇ ಹಿಂದೂ ನಾಯಕರನ್ನು ಹಾಗೂ ಚುನಾಯಿತ ಜನಪ್ರತಿನಿಧಿಗಳ ಜೊತೆ ಸಭೆ ನಡೆಸದೆ ಮುಸ್ಲಿಮ್ ಮುಖಂಡರ ಜೊತೆ ಸಭೆ ನಡೆಸಿ ನಿಮ್ಮ ಜೊತೆ ನಾವಿದ್ದೇವೆ ಎಂದು ಓಲೈಕೆ ರಾಜಕಾರಣವನ್ನು ಮುಂದುವರಿಸಿದ್ದಾರೆ. ಇಂತಹ ನಡೆಯಲ್ಲಿರುವ ಇವರುಗಳಿಂದ ಹಿಂದೂ ಸಮಾಜ ಹಾಗೂ ಮೃತ ಸುಹಾಸ್ ಶೆಟ್ಟಿಗೆ ನ್ಯಾಯ ದೊರಕಬಹುದು ಎಂಬುದನ್ನು ಹೇಗೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article