
ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಮಾರ್ಚ್‌ನಲ್ಲೇ ಸಂಚು..!
ಮಂಗಳೂರು: ಮಾರ್ಚ್ ಅಂತ್ಯದಲ್ಲೇ ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಹಂತಕರು ಪ್ಲ್ಯಾನ್ ಮಾಡಿದ್ದರು ಎಂಬ ವಿಚಾರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಬಹಿರಂಗವಾಗಿದೆ.
ಟಾರ್ಗೆಟ್ ಫಿಕ್ಸ್ ಮಾಡಿ ಸ್ವತಃ ಸುಹಾಸ್‌ಗೆ ಹಂತಕರ ತಂಡ ಟ್ಯಾಗ್ ಮಾಡಿತ್ತು. ಆಗಲೇ ಆ ಟ್ಯಾಗ್ ಮಾಡಿದ್ದ ವೀಡಿಯೋ ಸುಹಾಸ್ ಶೆಟ್ಟಿ ಡೌನ್‌ಲೋಡ್ ಮಾಡಿಕೊಂಡಿದ್ದರು. ಟಾರ್ಗೆಟ್ ಕಿಲ್ಲರ್ ಹೆಸರಿನ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಸುಹಾಸ್ಗೆ ಟಾರ್ಗೆಟ್ ಫಿಕ್ಸ್ ಎಂದು ಹಾಕಲಾಗಿತ್ತು. ಫಾಜಿಲ್ ಫೋಟೊ ಜೊತೆಗೆ ಸುಹಾಸ್ ಫೋಟೊ ಹಾಕಿ ಟಾರ್ಗೆಟ್ ದಿನಾಂಕ ನಿಗದಿಪಡಿಸಿದ್ದರು. ರಿವೇಂಜ್ ಸೂನ್ ಎಂದು ಸುಹಾಸ್ ಫೋಟೋ ಹಾಕಿ ಪೋಸ್ಟ್ ಮಾಡಿದ್ದರು.
ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಆರೋಪಿ ರಿವೇಂಜ್ ಬಗ್ಗೆಯೂ ಪೋಸ್ಟ್ ಹಾಕಲಾಗಿತ್ತು. ಬಶೀರ್ ಹತ್ಯೆ ಪ್ರಕರಣ 2018ರ ಜ.3 ರಂದು ನಡೆದಿತ್ತು. ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ ರಿವೇಂಜ್ ಸೂನ್ ಎಂದು ಪೋಸ್ಟ್ ಹಾಕಲಾಗಿತ್ತು. ಆದರೆ, ಹೇಳಿದಂತೆ ಫಾಜಿಲ್ ಹತ್ಯೆ ಆರೋಪಿ ಸುಹಾಸ್‌ನನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ. 2022ರ ಜು.28 ರಂದು ನಡೆದಿದ್ದ ಸುರತ್ಕಲ್‌ನ ಫಾಜಿಲ್ ಹತ್ಯೆಗೆ ಪ್ರತೀಕಾರ ಎಂದು ಹೇಳಲಾಗಿದೆ