
ಕಂಕನಾಡಿಯಲ್ಲಿ ಅಕ್ರಮ ಹುಕ್ಕಾ ಬಾರ್‌ಗೆ ಸಿಸಿಬಿ ಪೊಲೀಸ್ ದಾಳಿ
Sunday, May 25, 2025
ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿರುವ ಮಾಲ್ ವೊಂದರ ಪಾರ್ಕಿಂಗ್‌ನಲ್ಲಿರುವ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತೆನ್ನಲಾದ ಹುಕ್ಕಾ ಬಾರ್‌ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಂಕನಾಡಿಯ ಮ್ಯಾಕ್ ಮಾಲ್‌ನ ಪಾರ್ಕಿಂಗ್ ನಲ್ಲಿರುವ BLACK MOON RESTO CAFÉ ಎಂಬ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್‌ಗೆ ದಾಳಿ ನಡೆಸಲಾಗಿದೆ. ಅಕ್ರಮ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪಿಗಳಾದ ಸಿದ್ದೀಕ್ ಯಾನೆ ಎಂ.ಎಫ್.ಸಿ. ಸಿದ್ದೀಕ್, ಅಬ್ದುಲ್ ನಾಸಿರ್ ಮತ್ತು ಸಫ್ವಾನ್ ಎಂಬವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.