
ಪಂಪ್‌ವೆಲ್‌ನಲ್ಲಿ ಕೃತಕ ನೆರೆ ಸೃಷ್ಟಿ: ಸಂಚಾರ ಅಸ್ತವ್ಯಸ್ತ
Sunday, May 25, 2025
ಮಂಗಳೂರು: ಕರಾವಳಿಗೆ ನಿನ್ನೆ ಮುಂಗಾರು ಪ್ರವೇಶವಾಗಿದ್ದು, ಭಾನುವಾರ ಬೆಳಗ್ಗಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಂಪ್‌ವೆಲ್ ಫ್ಲೈಓವರ್ ಬ್ರಿಡ್ಜ್ ತಳಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಸಂಚಾರ ಸ್ತವ್ಯಸ್ಗೊಂಡಿದೆ.
ಪಂಪ್‌ವೆಲ್ ಮೇಲ್ಸೇತುವೆ ಬಳಿಯ ತೊಕ್ಕೊಟ್ಟು ಕಡೆಯಿಂದ ಬರುವ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ. ಪಂಪ್‌ವೆಲ್ ರಸ್ತೆಯ ನಾಲ್ಕೂ ಕಡೆಗಳಿಂದ ಹರಿದು ಬರುವ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ, ಕೃತಕ ನೆರೆ ಸೃಷ್ಟಿಯಾಗಿದೆ. ಪರಿಣಾಮ ಜಲಾವೃತಗೊಂಡ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ನೀರಿನಲ್ಲಿಯೇ ಸಂಚಾರ ನಡೆಸಲು ಆಗದೆ ಪರದಾಡುತ್ತಿದ್ದಾರೆ. ಪಾದಚಾರಿಗಳು, ವಾಹನ ಸವಾರರು ಕೃತಕ ನೆರೆಯಲ್ಲಿಯೇ ಸಂಚರಿಸಿ ಹೈರಾಣಾಗಿದ್ದಾರೆ.