
ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಯುವಕನಿಗೆ ಕೂರಿ ಇರಿತ
Friday, May 2, 2025
ಮಂಗಳೂರು: ಸುಹಾಸ್ ಶೆಟ್ಟಿ ಘಟನೆಯ ಬಳಿಕ ಕರಾವಳಿ ಪ್ರಕ್ಷುಬ್ಧವಾಗಿದ್ದು, ಬಜಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಮಂಗಳೂರು ಹೊರವಲಯ ಕಣ್ಣೂರಿನಲ್ಲಿ ಯುವಕನಿಗೆ ಚಾಕು ಇರಿತವಾದ ಘಟನೆ ನಡೆದಿದೆ.
ಶುಕ್ರವಾರ ಮುಂಜಾನೆ ಮೂರು ಗಂಟೆಗೆ ಐವರು ದುಷ್ಕರ್ಮಿಗಳಿಂದ ದಾಳಿ ನಡೆಸಲಾಗಿದೆ.
ಮಂಗಳೂರು ಮಾರುಕಟ್ಟೆಗೆ ಕೆಲಸಕ್ಕೆ ಹೋಗುತ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಇರ್ಶಾದ್ ಮನೆಯೊಂದಕ್ಕೆ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾನೆ.
ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರ್ಶಾದ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.