
ಗುಂಡ್ಯಡ್ಕ ಫಾಲ್ಸ್ ಸಾವ೯ಜನಿಕ ವೀಕ್ಷಣೆಗೆ ನಿಷೇಧ
Monday, May 26, 2025
ಮೂಡುಬಿದಿರೆ: ಅಪಾಯಕಾರಿ ಗುಂಡ್ಯಡ್ಕ ಫಾಲ್ಸ್ ನ 100 ಮೀಟರ್ ವ್ಯಾಪ್ತಿಯಲ್ಲಿ ಸಾವ೯ಜನಿಕ ವೀಕ್ಷಣೆಯನ್ನು ನಿಷೇಧಿಸಿದ್ದು ತಪ್ಪಿದ್ದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಪುತ್ತಿಗೆ ಗ್ರಾ. ಪಂಚಾಯತ್ ವತಿಯಿಂದ ಎಚ್ಚರಿಕೆಯ ಬ್ಯಾನರನ್ನು ಫಾಲ್ಸ್ ಬಳಿ ಹಾಕಲಾಗಿದೆ.
ಈ ಸಂದಭ೯ ತಾಲೂಕು ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ, ಪಿಡಿಒ ಬೀಮ ಬಿ. ನಾಯಕ್, ವಿ.ಎ ಗಾಯತ್ರಿ ಮತ್ತು ಪಂಚಾಯತ್ ಸಿಬಂಧಿಗಳು ಉಪಸ್ಥಿತರಿದ್ದರು. ಫಾಲ್ಸ್ ಗೆ ಭಾನುವಾರದಂದು ಮಂಗಳೂರಿನ ಕಡೆಯಿಂದ ಕೆಲವು ಯುವಕರು ಆಗಮಿಸಿ ತುಂಬಿಕೊಂಡಿರುವ ಎರುಗುಂಡಿಗೆ ಇಳಿದು ನೀರಿನ ರಭಸಕ್ಕೆ ಸಿಲುಕಿಕೊಂಡಿದ್ದು ಅವರನ್ನು ಸ್ಥಳೀಯರು ರಕ್ಷಿಸಿದ್ದರು.