ರಸ್ತೆಗೆ ಬಿದ್ದ ಬಂಡೆ, ಜಾಹೀರಾತು ಫಲಕದ ಕಂಬಕ್ಕೆ ಹಾನಿ

ರಸ್ತೆಗೆ ಬಿದ್ದ ಬಂಡೆ, ಜಾಹೀರಾತು ಫಲಕದ ಕಂಬಕ್ಕೆ ಹಾನಿ


ಬಂಟ್ವಾಳ: ಬಂಟ್ವಾಳ-ಮೂಡಬಿದಿರೆ ರಸ್ತೆಯ ಲೊರೆಟ್ಟೊ ಸಮೀಪದ ಕಮಲ್ ಕಟ್ಟೆ ಎಂಬಲ್ಲಿ ಬಂಡೆ ಕಲ್ಲೊಂದು ರಸ್ತೆಗೆ ಬಿದ್ದು ಘಟನೆ ನಡೆದಿದ್ದು, ಎರಡು ದಿನಗಳಾದರೂ ಸಂಬಂಧ ಪಟ್ಟ ಇಲಾಖೆಯಿಂದ ತೆರವುಗೊಳಿಸುವ ಕಾರ್ಯ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಗುಡ್ಡವನ್ನು ಅಗೆದು ಮಣ್ಣು ತೆಗೆದ ಹಿನ್ನಲೆಯಲ್ಲಿ ಎರಡು ಕಲ್ಲುಬಂಡೆಗಳು ರಸ್ತೆಗೆ ಉರುಳಿ ಬಿದ್ದಿದೆ. ಒಂದು ಬಂಡೆ ರಸ್ತೆ ಮಧ್ಯೆ ಬಿದ್ದು ಸಂಚಾರಕ್ಕೆ ಅಡಚಣೆಯಾದರೆ ಇನ್ನೊಂದು ಕಲ್ಲು ರಸ್ತೆಯ ಬದಿಯಲ್ಲಿ ಬಿದ್ದಿದೆ.


ಜೊತೆಗೆ ರಸ್ತೆ ಬದಿಯ ಜಾಹಿರಾತು ಫಲಕದ ಕಂಬವೊಂದು ರಸ್ತೆಗೆ ಬಿದ್ದಿದೆ. ಕಲ್ಲುಬಂಡೆ ಹಾಗೂ ಜಾಹೀರಾತು ಫಲಕದ ಕಂಬ ಎರಡು ಕೂಡ ರಸ್ತೆಯ ಮೇಲೆ ಬಿದ್ದು ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ರಸ್ತೆಯಲ್ಲಿ ವಾಹನಗಳು ಅತೀ ಹೆಚ್ಚು ವಾಹನಗಳು ಸಂಚರಿಸುತ್ತದ್ದು, ಇವೆರಡನ್ನು ಸಂಬಂಧಪಟ್ಟವರು ತೆರವುಗೊಳಿಸದಿದ್ದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸೋಮವಾರ ಪುರಸಭಾಧ್ಯಕ್ಷ ವಾಸು ಪೂಜಾರಿ ಅವರು ಸ್ಥಳಕ್ಕಾಗಮಿಸಿ ತಕ್ಷಣ ಬಂಡೆ ಮತ್ತು ಜಾಹೀರಾತು ಫಲಕದ ಕಂಬವನ್ನು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.

ವಾಲಿ ನಿಂತ ಮರ:

ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೋಟ್ಲು ಎಂಬಲ್ಲಿ ರಸ್ತೆಯ ಬದಿಯಲ್ಲಿರುವ ಬೃಹತ್ ಗಾತ್ರದ ಮರವೊಂದು ವಾಲಿ ನಿಂತಿದೆ. ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಪಾಯಕಾರಿ ಮರವನ್ನು ತೆರವುಗೊಳಿಸಿದ್ದಾರೆ.

ಜಡಿ ಮಳೆಯಿಂದಾಗಿ ತಾಲೂಕಿನ ಸಿದ್ದಕಟ್ಟೆ ಮತ್ತಿತರ ಗ್ರಾಮೀಣ ಭಾಗದಲ್ಲಿ ಮರಗಳು, ವಿದ್ಯುತ್ ಕಂಬ ತಂತಿಗಳು ರಸ್ತೆಗೆ ಬಿದ್ದಬಗ್ಗೆಯು ವರದಿಯಾಗಿದೆ.ಬಂಟ್ವಾಳದಾದ್ಯಂತ ಭಾನುವಾರ ರಾತ್ರಿಯಿಂದಲೂ ವಿದ್ಯುತ್ ಆಗಾಗ ಕೈಕೊಡುತಿದ್ದು, ಸೋಮವಾರ ಹಗಲು ಹೊತ್ತುಕೂಡ ಮುಂದುವರಿದಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article