ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಪಾಲಕರ ಸಭೆ

ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಪಾಲಕರ ಸಭೆ


ಮೂಡುಬಿದಿರೆ: ಶತಮಾನೋತ್ಸವ ಸಂಭ್ರಮದಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶುಮಂದಿರ ಕಡಲಕೆರೆ ಮೂಡುಬಿದಿರೆ ಇದರ ಶೈಕ್ಷಣಿಕ ವರ್ಷದ ಪ್ರಥಮ ಪಾಲಕರ ಸಭೆಯು ನಡೆಯಿತು. 

ಶಾಲೆಯ ಸಂಚಾಲಕ  ಶಾಂತರಾಮ ಕುಡ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ  ಗುಣಮಟ್ಟದ ಶಿಕ್ಷಣದ ಅಗತ್ಯತೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಂಬಂಧ  ಸೌಹಾರ್ದಯುತವಾಗಿದ್ದರೆ ಉತ್ತಮ ಸಮಾಜದ  ನಿರ್ಮಾಣ ಸಾಧ್ಯ ಎಂದು ತಿಳಿಸಿದರು.  

ಸೇವಾಂಜಲಿ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ  ರಾಜೇಶ ಬಂಗೇರ ಅವರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು, ಶಾಲೆಯ ಪ್ರಗತಿಗಾಗಿ ಕೈಗೊಂಡ ಕಾರ್ಯಗಳು ,ವರ್ಷಪೂರ್ತಿ ಆಯೋಜಿಸಿರುವ ಕಾರ್ಯಕ್ರಮಗಳ ಬಗ್ಗೆ  ತಿಳಿಸಿದರು. 

ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಪ್ರಸ್ತಾವನೆಗೈದರು. ಹರ್ಷಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಮಾತಾಜಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article