
ವೈಜ್ಞಾನಿಕ ಚಿಂತನೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸ
Friday, May 30, 2025
ಮೂಡುಬಿದಿರೆ: ಭಾರತದಲ್ಲಿ ಶಿಕ್ಷಣ ಮತ್ತು ವೈಜ್ಞಾನಿಕ ಚಿಂತನೆಯ ಕುರಿತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಚಿಂತನ - ಮಂಥನ ಓದುಗರ ವೇದಿಕೆಯು ಅತಿಥಿ ಉಪನ್ಯಾಸ ಆಯೋಜಿಸಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಭೌತಶಾಸ್ತçಜ್ಞ ಡಾ.ಶರತ್ ಅನಂತಮೂರ್ತಿ ಮುಖ್ಯ, ಭಾರತೀಯ ಜಿಡಿಪಿಯ ಶೇ.0.3 ರಷ್ಟು ಮಾತ್ರ ಸಂಶೋಧನೆಗೆ ಖರ್ಚು ಮಾಡಲಾಗುತ್ತಿದೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಹೆಚ್ಚು ಹೂಡಿಕೆ ಮಾಡಿದರೆ ಉತ್ತಮ ಸಂಶೋಧನೆ ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಗಳು ಪಾರದರ್ಶಕವಾದ ಅಂತಾರಾಷ್ಟ್ರೀಯ ಸಂವಾದ ಹೊಂದಿರಬೇಕು ಹಾಗೂ ಸೃಜನಶೀಲತೆ, ಜ್ಞಾನ ವಿಕಾಸ ಮತ್ತು ಸಾಮಾಜಿಕ ಬದಲಾವನೆಗಳ ಕೇಂದ್ರಗಳಾಗಿರಬೇಕು ಎಂದರು.
ಸಂಸ್ಥೆಯ ಟ್ರಷ್ಟಿ ವಿವೇಕ್ ಆಳ್ವ, ಚಿಂತನ-ಮಂಥನ ಕ್ಲಬ್ ಸಂಯೋಜಕ ಡಾ. ಶಶಿಕುಮಾರ್ ಉಪಸ್ಥಿತರಿದ್ದರು.