ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನಿಂದ ಸೂರು ಕೊಡುಗೆ

ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನಿಂದ ಸೂರು ಕೊಡುಗೆ


ಮೂಡುಬಿದಿರೆ: ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸಂಸ್ಥಾಪಕ ಸುನೀಲ್ ಮೆಂಡೋನ್ಸಾ ಮುಂದಾಳುತ್ವದಲ್ಲಿ ಹಲವಾರು ದಾನಿಗಳ ಸಹಕಾರದೊಂದಿಗೆ ತಾಕೊಡೆಯ ಅಸಹಾಯಕ ದಂಪತಿ ಲಾರೆನ್ಸ್-ಫೆಬಿಲೋಲಾ ಅವರಿಗೆ ಹೊಸಬೆಟ್ಟಿನಲ್ಲಿ ನಿಮಿ೯ಸಿರುವ ನೂತನ ಮನೆ ‘ಬೆಥೆಲ್’ನ ಹಸ್ತಾಂತರ ಕಾಯ೯ಕ್ರಮವು ಗುರುವಾರ ನಡೆಯಿತು.


ಹೊಸಬೆಟ್ಟು ಚಚಿ೯ನ ಧಮ೯ಗುರುಗಳಾದ ಗ್ರೆಗರಿ ಡಿ’ಸೋಜ ಮತ್ತು ರೋಹನ್ ಲೋಬೋ ಗೃಹಪ್ರವೇಶದ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು.

103ರ ಹರೆಯದ ಎಲ್ವೀನ್ ಗೋವಿಯಸ್ ಅವರು ಮನೆಯನ್ನು ಉದ್ಘಾಟಿಸಿದರು. 


ಸನ್ಮಾನ: ಮನೆಯ ಕಾಮಗಾರಿ ನಿವ೯ಹಿಸಿರುವ ಸಂತೋಷ್ ಸುವಣ೯ ಅವರನ್ನು ಸನ್ಮಾನಿಸಲಾಯಿತು.

ಹ್ಯೂಮಾನಿಟಿ ಟ್ರಸ್ಟಿನ ರೋಶನ್ ಬೆಳ್ಮಣ್, ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಕಥೋಲಿಕ್ ಸಭಾದ ಅಧ್ಯಕ್ಷ ಆಲ್ವೀನ್ ರೊಡ್ರಿಗಸ್, ಬರಹಗಾರ ಲಾಯ್ಡ್ ರೇಗೋ ತಾಕೊಡೆ, ವಕೀಲ ನಾಗೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸಂಸ್ಥಾಪಕ ಸುನಿಲ್ ಮೆಂಡೋನ್ಸಾ ಉಪಸ್ಥಿತರಿದ್ದರು. 

ಕಳೆದ 28 ವರುಷಗಳಿಂದ ಬಾಡಿಗೆ ಮನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಲಾರೆನ್ಸ್ ಮೆಂಡೋನ್ಸಾ ಕುಟುಂಬಕ್ಕೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸೂರನ್ನು ನಿಮಿ೯ಸುವ ಮೂಲಕ ಮಾನವೀಯತೆಯನ್ನು ತೋರಿದೆ.

‘ಮನುಷ್ಯತ್ವಕ್ಕೆ ಮಾನವೀಯ ಧಮ೯’ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಕಳೆದ ಎಂಟು ವಷ೯ಗಳಿಂದ 1 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಹಿಂದುಳಿದ ವಗ೯ದ ಮಕ್ಕಳಿಗೆ ವಿದ್ಯಾಭ್ಯಾಸ, ಚಿಕಿತ್ಸೆಗೆ ಸಹಾಯಧನವನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article