
"ಇಮ್ಯಾನುವೆಲ್" ಗೃಹ ಹಸ್ತಾಂತರ
Thursday, May 8, 2025
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ಚಚ್೯ಬಳಿ ಕಳೆದ ಕೆಲವು ವರ್ಷಗಳಿಂದ ಬಾಡಿಗೆ ಕೊಠಡಿ ಯಲ್ಲಿ ವಾಸವಾಗಿದ್ದ ಸ್ವ್ಯಾನಿ ನೊರೋನ್ಹಾ ಕುಟುಂಬಕ್ಕೆ ಸಮಾಜ ಸೇವಕ ಅನಿಲ್ ರೋಬೆಲ್ ಮೆಂಡೋನ್ಸ್ ಅವರು ತಮ್ಮ care ಚಾರಿಟೇಬಲ್ ಟ್ರಸ್ಟ್ ಮತ್ತು ಗಂಟಾಲ್ ಕಟ್ಟೆ ಚಚ್೯ ಸಹಕಾರದೊಂದಿಗೆ ಗಂಟಾಲ್ಕಟ್ಟೆ ನೀರಲ್ಕೆ ಬಳಿ ಸುಮಾರು 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಮನೆಯನ್ನು ಹಸ್ತಾಂತರಿಸಲಾಯಿತು. ಗಂಟಾಲ್ಕಟ್ಟೆ ನಿತ್ಯ ಸಹಾಯ ಮಾತಾ ಚಚ್೯ನ ಧರ್ಮ ಗುರು ಫಾ. ರೊನಾಲ್ಡ್ ಪ್ರಕಾಶ್ ಡಿಸೋಜ ಅವರು ಬಡಜನರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬಡವರಿಗೆ ಸೂರು ನಿರ್ಮಿಕೊಡುವಲ್ಲಿ ಅನಿಲ್ ಮೆಂಡೋನ್ಸ್ ಅವರು ಹೃದಯ ವೈಶಾಲ್ಯತೆ ಮೆಚ್ಚುವಂತದ್ದು ಎಂದರು.
ವಕೀಲ ಪ್ರವೀಣ್ ಲೋಬೋ ಅವರು ಮಾತನಾಡಿ ತಾನು ಅನಿಲ್ ಅವರನ್ನು ಬಾಲ್ಯದಿಂದ ನೋಡುತ್ತಾ ಬಂದಿದ್ದು ಈತ ನನ್ನ ಸಹಪಾಠಿಯಕ ಹೌದು. ಆತನ ಇಂದಿನ ಈ ಬೆಳವಣಿಗೆ ಬಹಳ ನೆಮ್ಮದಿಯನ್ನು ತಂದಿದೆ ಎಂದರು.
ಪುರಸಭಾ ಸದಸ್ಯ ಜೋಸ್ಸಿ ಮೀನೇಜಸ್, ಉದ್ಯಮಿ ದೀಪಕ್ ಕಿನ್ನಗೋಳಿ, ಗಂಟಾಲ್ಕಟ್ಟೆ ಚಚ್೯ನ ಉಪಾಧ್ಯಕ್ಷ ಸುನಿಲ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು. ಗಾಡ್ಮಿಸ್ ಮಿನೇಜಸ್ ನಿರೂಪಿಸಿದರು. ಅನಿಲ್ ಮೆಂಡೋನ್ಸ್ ವಂದಿಸಿದರು. ಗಂಟಾಲ್ಕಟ್ಟೆ ಚಚ್೯ ವತಿಯಿಂದ 5.50ಲಕ್ಷ ಹಾಗೂ ಐಸಿವೈಯಂ 25000 ರೋಕಿ ಪಿಂಟೊ ಗಂಟಾಲ್ಕಟ್ಟೆ ಅವರು 50 ಕೋಟಿ ಗೋನಿ ಸಿಮೆಂಟ್ ಮತ್ತು ಮುಖ್ಯ ದ್ವಾರವನ್ನು, ವಿನ್ಸೆಂಟ್ ಮಿನೇಜಸ್ ಮರಳು ಮತ್ತು ಪಾದೆಕಲ್ಲು, ಲೋಯ್ಡ್ ಮಿನೇಜಸ್ ಗಂಟಾಲ್ಕಟ್ಟೆ ಸುಣ್ಣ ಬಣ್ಣ, ರಿಜ್ವಾನ್ ವಿದ್ಯಾಗಿರಿ ಪೈಂಟ್ ಒದಗಿಸಿದ್ದರು.
ಸಮಾಜ ಸೇವಕ ಅನಿಲ್ ಅವರು ಅಸಹಾಯಕರಿಗೆ ಒದಗಿಸಿರುವ 5ನೇ ಮನೆ ಇದಾಗಿದೆ. 6ಮತ್ತು 7ನೇ ಮನೆ ನಿರ್ಮಾಣ ಹಂತದಲ್ಲಿದೆ.