
ಮೇ 14 ಮತ್ತು 15 ರಂದು ಚೇಳಾರ್ ಖಂಡಿಗೆ ಜಾತ್ರೆ: ತುಳುನಾಡ ಸಂತೆ ವಿಶೇಷ ಆಕರ್ಷಣೆ
Wednesday, May 7, 2025
ಸುರತ್ಕಲ್: ಚೇಳೈರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಜಾತ್ರ ಮಹೋತ್ಸವ ಮೇ 14 ಮತ್ತು ಮೇ 15 ರಂದು ನಡೆಯಲಿದೆ.
ಮೇ 14 ರಂದು ಬೆಳಗ್ಗೆ 7 ಗಂಟೆಗೆ ಮೀನು ಹಿಡಿಯುವಿಕೆ ನಂತರ ಮೂಲಸ್ಥಾನದಲ್ಲಿ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ೫ ಗಂಟೆಯಿಂದ ಯಕ್ಷಗಾನ ಬಯಲಾಟ ರಾತ್ರಿ 9 ಗಂಟೆಗೆ ಬ್ರಹ್ಮಸ್ಥಾನದಲ್ಲಿ ತಂಬಿಲ, ಕುಮಾರ ಸಿರಿಗಳ ದರ್ಶನ, ದೈವಗಳ ಭಂಡಾರ ಮೂಲಸ್ಥಾನಕ್ಕೆ ಹೋಗುವುದು.
ಮೇ 15 ರಂದು ಬೆಳಗ್ಗೆ 5 ಗಂಟೆಗೆ ಧರ್ಮರಸು ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ, ಪರಿವಾರ ದೈವಗಳಿಗೆ ನೇಮೋತ್ಸವ, ನಂತರ ನಾಗದೇವರಿಗೆ ತಂಬಿಲ, ಜಾರಂತಾಯ ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಕೋರ್ದಬ್ಬು ದೈವದ ಭೇಟಿ, ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಅನ್ನಸಂತರ್ಪಣೆ ರಾತ್ರಿ 8 ಗಂಟೆಗೆ ಪ್ರಸನ್ನ ಶೆಟ್ಟಿ ಬೈಲೂರು ರಚಿಸಿ ನಿರ್ದೇಶಿಸಿದ ‘ಅಷ್ಟಮಿ’ ನಾಟಕ ಪ್ರದರ್ಶನ ನಡೆಯಲಿದೆ.
ವಿಶೇಷವಾಗಿ ‘ತುಳುನಾಡ ಸಂತೆ’ ಎರಡು ದಿನ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ತೋಕೂರುಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.