ಆಪರೇಷನ್ ಸಿಂಧೂರದ ಮೂಲಕ ಉಗ್ರರಿಗೆ ಮರಣ ದಂಡನೆ ವಿಧಿಸಿದೆ: ಡಾ. ಭರತ್ ಶೆಟ್ಟಿ ವೈ.

ಆಪರೇಷನ್ ಸಿಂಧೂರದ ಮೂಲಕ ಉಗ್ರರಿಗೆ ಮರಣ ದಂಡನೆ ವಿಧಿಸಿದೆ: ಡಾ. ಭರತ್ ಶೆಟ್ಟಿ ವೈ.


ಮಂಗಳೂರು: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನರಮೇಧ ನಡೆಸಿ ಹಲವಾರು ಹೆಣ್ಣು ಮಕ್ಕಳ ಸಿಂಧೂರ ಕಸಿದುಕೊಂಡ ಉಗ್ರರಿಗೆ ತಕ್ಕ ಪಾಠ ಕಲಿಸಲು   ಪ್ರತಿಯಾಗಿ ಭಾರತ ಸರ್ಕಾರ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ’ ಮೂಲಕ ಯಶಸ್ವಿಯಾಗಿ ದಾಳಿ ನಡೆಸಿ, ಉಗ್ರರ ಮೃತ ದೇಹವೂ  ಗುರುತಿಸಲಾಗದಷ್ಟು ಭೀಕರ ಮರಣದಂಡನೆ ನೀಡಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಉಗ್ರಗಾಮಿಗಳನ್ನು ಪೋಷಿಸುವ ರಾಷ್ಟ್ರಗಳಿಗೆ, ಭಾರತದ ಒಳಗಡೆಯೂ ಉಗ್ರಗಾಮಿಗಳಿಗೆ ಕುಮ್ಮಕ್ಕು, ಹಣ ಸಹಾಯ ನೀಡುವ ದೇಶದ್ರೋಹಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಲು ತಿಳಿದಿದೆ. ಜಾಗತಿಕವಾಗಿ ಶಾಂತಿಯನ್ನು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೂಡ ಬದ್ಧವಾಗಿದೆ ಎಂದು ತೋರಿಸಿಕೊಟ್ಟಿದೆ. ಭಾರತ ಇದೀಗ ಪಾಕಿಸ್ತಾನದ ಮೇಲೆ ನಡೆಸಿರುವ ದಾಳಿ ಸೀಮಿತವಾಗಿರುವುದಾದರೂ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಮತ್ತೆ ಮತ್ತೆ ತೋರಿಸಿದಲ್ಲಿ ಮುಂದಿನ ಬಾರಿಯ ಆಕ್ರಮಣ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುವುದರೊಂದಿಗೆ ಪೂರ್ಣಗೊಳಿಸಬೇಕು ಎಂದು ಭರತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article