
IPL ಪರಿಷ್ಕೃತ ವೇಳಾಪಟ್ಟಿ ಪ್ರಕಟ
Tuesday, May 13, 2025
ಮುಂಬಯಿ: ಭಾರತ-ಪಾಕ್ ಸಂಘರ್ಷದ ಕಾರಣ ಮುಂದೂಡಿದ್ದ ಐಪಿಎಲ್ ಪಂದ್ಯ ಮತ್ತೆ ಮೇ 17 ರಿಂದ ಶುರುವಾಗಲಿದೆ. ಇನ್ನುಳಿದ 17 ಪಂದ್ಯಗಳು 6 ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಸೋಮವಾರ ತಡರಾತ್ರಿ ಬಿಸಿಸಿಐ ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುನರಾರಂಭ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಾಲುದಾರರಿಗೆ ಸಂತಸವನ್ನುಂಟು ಮಾಡಿದೆ.
ಐಪಿಎಲ್ ಪಂದ್ಯಗಳನ್ನು ಒಂದು ವಾರ ಮುಂದಕ್ಕೆ ಹಾಕಿದಾಗ ಕೆಲವು ವಿದೇಶಿ ಆಟಗಾರರು ತಮ್ಮ ದೇಶಕ್ಕೆ ಮರಳಿದ್ದರು. ಟೂರ್ನಿ ಮರು ಆರಂಭವಾದಾಗ ಅವರಲ್ಲಿ ಕೆಲವರಾದರೂ ವಾಪಸು ಬರುವ ಸಾಧ್ಯತೆ ಕಡಿಮೆ. ವಿದೇಶಿ ಆಟಗಾರರಲ್ಲಿ ಮುಖ್ಯವಾಗಿ ವಿಮಾನ ನಿಲ್ದಾಣ ಸ್ಥಗಿತ ಮತ್ತು ಪ್ರಯಾಣದ ಅಡಚಣೆಗಳಿಂದ ಆಟಗಾರರರಲ್ಲಿ ಸಮಸ್ಯೆ ಎದುರಾಗಿದೆ.