‘ಸಂಶೋಧನೆ’ ಸಾಮಾಜಿಕ ಬೆಳವಣಿಗೆಗೂ ಪೂರಕ: ಡಾ. ಮೊಂತೆರೊ

‘ಸಂಶೋಧನೆ’ ಸಾಮಾಜಿಕ ಬೆಳವಣಿಗೆಗೂ ಪೂರಕ: ಡಾ. ಮೊಂತೆರೊ


ಪುತ್ತೂರು: ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾದರೆ ಮೊದಲು ನಾವು ತಯಾರಾಗಬೇಕು. ಸಂಶೋಧನೆ ಕೇವಲ ವೃತ್ತಿಪರ ನೆಲೆಗಷ್ಟೇ ಅಗತ್ಯವಲ್ಲದೆ ವ್ಯಕ್ತಿಗತ ಹಾಗೂ ಸಾಮಾಜಿಕ ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಆಲರಾದ ಡಾ. ಆಂಟನಿ ಪ್ರಕಾಶ್ ಮೊಂತೆರೊ ಅಭಿಪ್ರಾಯಪಟ್ಟರು. 

ಅವರು ಇಂದು ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಹೊಸ ಸಂಶೋಧಕರನ್ನು ಉತ್ತೇಜಿಸುವ ಹಾಗೂ ಅಧ್ಯಾಪಕರ ಸಂಶೋಧನಾ ಕೌಶಲ್ಯವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ‘ರಿಸರ್ಚ್ ಇನ್ಫೋರ್ಮೇಟಿಕ್ಸ್-ಸಂಶೊಧನಾ ವಿಧಾನಶಾಸ್ತ್ರ ಮತ್ತು ಸಂಶೋಧನಾ ಬರಹ’ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೈಸೂರಿನ ಯಸ್‌ಡಿಯಂ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಂಡ್ ಡೆವಲಪ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನಿಲ್ ಯಂ.ವಿ ಅವರು  ಪೌಂಡೇಶನ್ ಆಫ್ ರೀಸರ್ಚ್ ಡಿಸೈನ್, ರಿಟ್ರೇಚರ್ ರಿವ್ಯೂ ಆಂಡ್ ರೀಸರ್ಚ್ ಗ್ಯಾಪ್, ರೈಟಿಂಗ್ ಆಂಡ್ ಡಿಸಿಮಿನೇಟಿಂಗ್ ರೀಸರ್ಚ್ ಎಂಬ ಮೂರು ಪ್ರಮುಖ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು. 

ಸಂಶೋಧಕರು ತಮ್ಮ ಸಂಶೋಧನೆಯ ವಿವಿಧ ಹಂತಗಳಲ್ಲಿ ಉಪಯೋಗಿಸುವ ಹಾಗೂ ಉಚಿತವಾಗಿ ಲಭ್ಯವಿರುವ ಎಐ ಉಪಕರಣಗಳಾದ ಚಾಟ್‌ಜಿಪಿಟಿ, ಗ್ರೇಡ್‌ಕೋಚ್, ಪರ್‌ಪ್ಲೆಕ್ಸ್‌ಸಿಟಿ, ಜೆನ್ನಿ, ಗೂಗಲ್ ಜೆಮಿನಿ, ಮ್ಯಾನ್‌ಸೆಕ್ಟರ್ ಅಕಾಡೆಮಿಕ್ ಫ್ರೇಸ್‌ಬ್ಯಾಂಕ್‌ಗಳ ಕುರಿತು ಮಾಹಿತಿ ನೀಡಿದರು. 

ಈ ಉಪಕರಣಗಳು ಸಂಶೋಧಕರಿಗೆ ಸಮಯ ಉಳಿಕೆ, ಶುದ್ದತೆ ಮತ್ತು ನಿಖರತೆಯನ್ನು ಹೆಚ್ಚಿಸಲು ಮತ್ತು ತಮ್ಮ ಕ್ಷೇತ್ರದ ಇತ್ತೀಚಿನ ಬೆಳವಣಿಗಳನ್ನು ತಿಳಿದುಕೊಳ್ಳಲು ಯಾವ ರೀತಿ ಉಪಕಾರಿಯಾಗಿದೆ ಹಾಗೂ ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಪ್ರಾಯೋಗಿಕವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿವಾನಿ ಮಲ್ಯ ಪ್ರಾರ್ಥಿಸಿದರು. ರಿಸರ್ಚ್ ಡೆವಲಪ್‌ಮೆಂಟ್ಟ್ ಸೆಲ್ ನಿರ್ದೇಶಕರಾದ ಡಾ. ವಿನಯಚಂದ್ರ ಅವರು ಸ್ವಾಗತಿಸಿದರು. ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್‌ರಹ್ಮಾನ್ ಜಿ ವಂದಿಸಿದರು. ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುರಕ್ಷಾ ಅವರು ಕಾರ್ಯಕ್ರಮ ನಿರೂಪಿಸಿದರು. 

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಿಸರ್ಚ್‌ಡೆವಲಪ್‌ಮೆಂಟ್ಟ್ ಸೆಲ್, ಇನ್ಸ್ಟಿಟ್ಯೂಶನ್ ಇನ್ನೋವೇಸನ್ ಕೌನ್ಸಿಲ್ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸಹಯೋಗದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಉಪನ್ಯಾಸಕರು ಮತ್ತು ಸಂಶೋಧನಾ ಆಸಕ್ತರು ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article