
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ
Friday, May 2, 2025
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಶುಕ್ರವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ದೂರದ ಊರುಗಳಿಂದ ಆಗಮಿಸಿ ಶ್ರೀದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದರು.
ತಿಂಗಳ ಶುದ್ಧ ಷಷ್ಟಿ ದಿನವಾದ ಇಂದು ಅಧಿಕ ಸಂಖ್ಯೆಯ ಭಕ್ತರು ವಿವಿಧ ಸೇವೆಗಳನ್ನ ದೇವಳದಲ್ಲಿ ಸಲ್ಲಿಸಿರುವರು. ಮಧ್ಯಾಹ್ನದ ಹೊತ್ತಿಗೆ ನಾಗ ಪ್ರತಿಷ್ಠಾ ಮಂಟಪದಲ್ಲಿ ಭಕ್ತಾದಿಗಳ ಸರತಿ ಸಾಲು ಇಡೀ ಅಂಗಣವನ್ನೇ ಪಸರಿಸಿತ್ತು.
ಇಂದು ಕುಕ್ಕೆಯಲ್ಲಿ ಅಂಗಡಿ ಮುಂಗಟುಗಳು ಬಂದ್ ಆಗಿದ್ದರು ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಶ್ರೀ ದೇವಳದ ವತಿಯಿಂದ ಪ್ರಸಾದ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆ ಹಾಗೂ ಭಕ್ತಾದಿಗಳ ಸರತಿಯ ಸಾಲಿನ ವ್ಯವಸ್ಥೆಗಳನ್ನ ಮಾಡಲಾಗಿತ್ತು.