
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು
Friday, May 9, 2025
ಸುಬ್ರಹ್ಮಣ್ಯ: ನಡುಗಲ್ಲಿನಲ್ಲಿ ಕೆಲಸಕ್ಕಿದ್ದ ಮುಳ್ಳೇರಿಯಾದ ವ್ಯಕ್ತಿಯೋರ್ವರು ಮೇ 6 ರಂದು ವಿಷ ಸೇವಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದು, ಮೇ 9 ರಂದು ಮೃತ ಪಟ್ಟ ಘಟನೆ ವರದಿಯಾಗಿದೆ.
ಕಾಸರಗೋಡು ಮುಳ್ಳೇರಿಯಾ ಕೃಷ್ಣ ಮಣಿಯಾಣಿ ಎಂಬವರು ನಡುಗಲ್ಲಿನ ಅಶೋಕ್ ಕೊರ್ಬಟ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದು, ಮೊನ್ನೆ ದಿನ ಮಧ್ಯಾಹ್ನ ವಿಷ ಸೇವಿಸಿದ್ದಾರೆ. ಊಟ ಮಾಡಿ ವಾಂತಿ ಮಾಡಿಕೊಂಡಾಗ ವಿಷ ಸೇವಿಸಿರುವುದು ಮನೆಯವರ ಗಮನಕ್ಕೆ ಬಂದಿದ್ದು, ಬಳಿಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧರಾಗಿದ್ದಾರೆ.
ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.