
ಎಸ್‌ಡಿಎಂ ನ್ಯಾಚುರೋಪತಿಗೆ ಆರ್‌ಜಿಯುಹೆಚ್‌ಎಸ್‌ನ ಗೋಲ್ಡ್ ಮೆಡಲ್
Tuesday, May 13, 2025
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಡಾ. ಗನ್ಯಾಶ್ರೀ 4 ವರ್ಷಗಳಲ್ಲಿ ಮೊದಲ ಶ್ರೇಯಾಂಕಕ್ಕಾಗಿ ಹಾಗೂ ಆಯುಷ್ ವಿಭಾಗದಲ್ಲಿಯೂ ಮೊದಲನೇ ಸ್ಥಾನ ಪಡೆದು 4 ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಇಂದು ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 27ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕವನ್ನು ಪ್ರದಾನ ಮಾಡಿದರು.