.jpg)
ಹೆಚ್ಚುವರಿ ಸಹಾಯಧನ ಒದಗಿಸಲು ಪುರಸಭಾಧ್ಯಕ್ಷರಿಂದ ಸಚಿವರಿಗೆ ಮನವಿ
Sunday, June 1, 2025
ಬಂಟ್ವಾಳ: ಕಳೆದೊಂದು ವಾರದಿಂದೀಚೆಗೆ ಸುರಿದ ವ್ಯಾಪಕ ಮಳೆ, ಗಾಳಿಯಿಂದಾಗಿ ಬಂಟ್ವಾಳದ ಪುರಸಭಾ ವ್ಯಾಪ್ತಿಯಲ್ಲಿ ಭಾಗಶಃ ಹಾಗೂ ಪೂರ್ಣಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿರುವಿದರಿಂದ ಹೆಚ್ಚುವರಿ ಸಹಾಯಧನ ಒದಗಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್ ಅವರಿಗೆ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅವರು ಮನವಿ ಮಾಡಿದ್ದಾರೆ.
ಮಳೆಯ ಅರ್ಭಟದಿಂದಾಗಿ ಪುರಸಭಾ ವ್ಯಾಪ್ತಿಯಲ್ಲು ಹಲವಾರು ಮನೆಗಳು ಲುಸಿದಿದ್ದಲ್ಲದೆ ಕೆಲ ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಬಹುತೇಕ ಮನೆ ಬದಿಯ ತಡೆಗೋಡೆ, ಗುಡ್ಡಗಳು ಜರಿದು ಹಾನಿಯಾಗಿರುತ್ತದೆ. ಕೆಲ ಮನೆಗಳಿಗೆ ನೆರೆನೀರು ಕೂಡ ನುಗ್ಗಿ ತೊಂದರೆಯಾಗಿದ್ದು, ಸರಕಾರದಿಂದ ಸತವಲ್ಪ ಮಟ್ಟಿನ ಸಹಾಯಧನ ಸಿಗುತ್ತಿದ್ದು, ಇದನ್ನು ಹೆಚ್ಚುವರಿಯಾಗಿ ಪೂರ್ಣ ಪ್ರಮಾಣದಲ್ಲಿ ಒದಗಿಸುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಿಶೇಷವಾಗಿ ಬಂಟ್ವಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡ್ಡಗಾಡುಗಳಿದ್ದು ಮನೆ ನಿರ್ಮಿಸುವಾಗ ತಡೆಗೋಡೆ ನಿರ್ಮಿಸಿ ಮನೆಯನ್ನು ನಿರ್ಮಿಸಲಾಗಿರುತ್ತದೆ. ಭೀಕರ ಮಳೆಗೆ ಆ ತಡೆಗೋಡೆಗಳು ದರಶಾಹಿಯಾಗುತ್ತಿದ್ದು ಅದಕ್ಕೆ ವಿವತ್ತು ನಿರ್ವಹಣೆ ಅಡಿಯಲ್ಲಿ ಹೆಚ್ಚಿನ ಪರಿಹಾರವಾಗಿ ಸಹಾಯಧನವನ್ನು ಹಾಗೂ ಮನೆ ದುರಸ್ತಿಗೆ ಹಾಗೂ ಪೂರ್ಣ ಮನೆ ಕಳಕೊಂಡವರಿಗೆ ಹೆಚ್ಚಿನ ಸಹಾಯಧನ ಒದಗಿಸುವಂತೆಯು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.