ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 40 ಕೋಟಿ ಹಗರಣ ಪ್ರಕರಣ: ಸೊಸೈಟಿಯ 10 ಮಂದಿಯ ಆಸ್ತಿ ಮುಟ್ಟುಗೋಳಿಗೆ ನೋಟಿಸ್ ಜಾರಿ

ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 40 ಕೋಟಿ ಹಗರಣ ಪ್ರಕರಣ: ಸೊಸೈಟಿಯ 10 ಮಂದಿಯ ಆಸ್ತಿ ಮುಟ್ಟುಗೋಳಿಗೆ ನೋಟಿಸ್ ಜಾರಿ

ಬೆಳ್ತಂಗಡಿ: ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಬೆಳ್ತಂಗಡಿ ಈ ಸಂಘದ 2023-24 ರ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಸುಮಾರು 40 ಕೋಟಿ ಹಗರಣದಲ್ಲಿ ಬಗ್ಗೆ ಸಹಕಾರಿ ಸಂಘದ ಉಪ ನಿಬಂಧಕರು 2023-24ರಲ್ಲಿ ಜವಬ್ದಾರಿಯಲ್ಲಿದ್ದ 15 ಮಂದಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದು ಇದರಿಂದ ಹಗರಣ ನಡೆದಿರುವುದು ಧೃಡ ಪಟ್ಟಿರುವುದರಿಂದ 10 ಮಂದಿ ಸೊಸೈಟಿಯ ಜವಬ್ದಾರಿ ವಹಿಸಿದ್ದ ಆಸ್ತಿಯನ್ನು ಮುಟ್ಟುಗೋಳು ಹಾಕಲು ಜೂ.5 ರಂದು ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಿಂದ 10 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಆಸ್ತಿ ಮುಟ್ಟುಗೋಳಿಗೆ ನೋಟಿಸ್ ಜಾರಿಯಾದವರ ವಿವರ:

ಅಧ್ಯಕ್ಷ ಸಿ.ಹೆಚ್. ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ ಆರ್. ನಾಯಕ್, ವಿಶ್ವನಾಥ, ಪ್ರಮೋದ್ ಆರ್. ನಾಯಕ್, ಕಿಶೋರ್ ಲಾಯಿಲ, ಪಿ.ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ. ಚಂದ್ರಕಾಂತ್, ಸಿಬ್ಬಂದಿ ಸರಿತಾ ಇವರು ಹತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ ಜೂ.5 ರಂದು ನೋಟಿಸ್ ಜಾರಿಯಾಗಿದೆ.

ನಗದು ಠೇವಣಿ ಇಡಲು ಅವಕಾಶ:

ಒಂದು ವೇಳೆ ಆಸ್ತಿ ಜಪ್ತಿ ಆದೇಶವನ್ನು ತೆರವುಗೊಳಿಸಲು ಬಯಸಿದಲ್ಲಿ ಜೂ.20 ರ ಒಳಗೆ 30,45,24,278(ಮೂವತ್ತು ಕೋಟಿ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು) ನಗದು ಭದ್ರತೆಯಾಗಿ ಈ ನ್ಯಾಯಾಲಯದ ಪಿ.ಡಿ ಖಾತೆಯಲ್ಲಿ ನಿಗದಿತ ಅವಧಿಯೊಳಗೆ ಠೇವಣಿ ಇರಿಸತಕ್ಕದ್ದು ಇಲ್ಲವಾದರೆ ಆಸ್ತಿ ಮುಟ್ಟುಗೋಳು ಹಾಕಲಾಗುವುದಾಗಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪ್ರಮುಖ ಆದೇಶ:

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 103(1)ರಲ್ಲಿ ದತ್ತವಾದ ಅಧಿಕಾರವನ್ನು ಜಿಲಾಯಿಸುತ್ತಾ, ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಆದ ನಾನು 01.04, 05, 06, 08, 09, 11, 13, 14 ಜ ಜeಚಿಜ 2 ಶೆಡ್ಯೂಲ್‌ನಲ್ಲಿ ಕಾಣಿಸಿರುವ ಚರಾಸ್ತಿಯನ್ನು ಷರತ್ತಿಗೆ ಒಳಪಟ್ಟು ತೀರ್ಪು ಪೂರ್ವ ಜಪ್ತಿ ಮಾಡಿ ಈ ಮೂಲಕ ಆದೇಶ ಹೊರಡಿಸಿರುತ್ತೇನೆ. ಒಂದು ವೇಳೆ ಈ ಆದೇಶವನ್ನು ಅತೀಕ್ರಮಿಸಿ ಯಾರದರೂ ಜಪ್ತಿಗೊಳಪಟ್ಟ ಈ ಕೆಳಕಂಡ ಚರಾಸ್ತಿಯನ್ನು ಖರೀದಿಸಿದ್ದಲ್ಲಿ ಅಂತಹ ಹೊಣೆಗಾರಿಕೆಗೆ ಖರೀದಿಸಿದವರೇ ಸಂಪೂರ್ಣ ಹೊಣೆಗಾರರು ಆಗಿರುತ್ತಾರೆ ಎಂದು ನೋಟೀಸ್‌ನಲ್ಲಿ ನಮೂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article