ಕೆಂಪು ಕಲ್ಲು ಗಣೆಗಾರಿಕೆಗೆ ದಾಳಿ

ಕೆಂಪು ಕಲ್ಲು ಗಣೆಗಾರಿಕೆಗೆ ದಾಳಿ

ಕಡಬ: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರದೇಶಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಸವಣೂರು ಗ್ರಾಮದ ಇಡ್ಯಾಡಿಯಲ್ಲಿ ಭಾನುವಾರ ನಡೆದಿದೆ.

ಇಡ್ಯಾಡಿ ಯಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ಳಾರೆ ಠಾಣೆ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಈರಯ್ಯ ಅವರು ಸಿಬ್ಬಂದಿ ಜೊತೆ ಗಣಿಗಾರಿ ನಡೆಸುತ್ತಿರುವ ಸ್ಥಳಕ್ಕೆ ಜೂ.15ರಂದು ರಾತ್ರಿ ದಾಳಿ ಮಾಡಿದ್ದಾರೆ ಈ ವೇಳೆ ಪೊಲೀಸ್ ಜೀಪ್ ಬರುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದು ಓರ್ವ ಆರೋಪಿ (ಸುಲೈಮಾನ್ ಅನ್ಯಾಡಿ) ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳದಲ್ಲಿ ಎರಡು ಲಾರಿಗಳು, ಕಲ್ಲು ತೆಗೆಯುವ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲಾರಿಯಲ್ಲಿ ಕೆಂಪು ಕಲ್ಲನ್ನು ತುಂಬಿಸಿರುವುದು ಕಂಡುಬಂದಿದ್ದು ಲಾರಿಯ ನಂಬ್ರ ಕೆ.ಎ.21 ಂ 4150 ಆಗಿರುತ್ತದೆ. ಅಲ್ಲದೆ ಸ್ಥಳದಿಂದ ಸ್ವಲ್ಲ ದೂರದಲ್ಲಿ ನಿಂತಿದ್ದ ಇನ್ನೊಂದು ಲಾರಿಯಲ್ಲಿ ಕೂಡಾ ಕೆಂಪು ಕಲ್ಲನ್ನು ತುಂಬಿಸಿಟ್ಟಿರುವುದು ಕಂಡು ಬಂದಿದ್ದು ಆ ಲಾರಿಯ ನಂಬ್ರ ಏಐ 57 ಃ 3314 ಆಗಿರುತ್ತದೆ.

ಈ ಕೂಡಲೇ ಘಟನೆಗೆ ಸಂಬಂಧಿಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಪರವಾನಿಗೆ ಪಡೆಯದೆ ಅಕ್ರಮವಾಗಿ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಆರೋಪದಡಿ ಆರೋಪಿಗಳ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ. 27/2025 ಕಲಂ:42, 43, 44, ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ 1994,ಮತ್ತು ಕಲಂ:4(1),4(1ಎ),21(1),(1ಎ) ಎಮ್, ಎಮ್, ಆರ್, ಡಿ, 1957 ಮತ್ತು ಕಲಂ:303(2),ಬಿ. ಎನ್. ಎಸ್. 2023. ಯಂತೆ ಪ್ರಕರಣ ದಾಖಲಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article