
ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು: ಅಪಾರ ನಷ್ಟ
Monday, June 16, 2025
ಉಜಿರೆ: ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.
ಇಲ್ಲಿಯ ಮಠದಮಜಲು ಅನಂತರಾಮ ರಾವ್ ಅವರ ಕೃಷಿ ತೋಟಕ್ಕೆ ಸೋಮವಾರ ಮುಂಜಾನೆ 3 ಗಂಟೆ ಬಳಿಕ ನುಗ್ಗಿದ ಕಾಡಾನೆಗಳು 250ಕ್ಕಿಂತ ಅಧಿಕ ಅಡಕೆ ಮರ, 2 ತೆಂಗು, ಬಾಳೆಗಿಡ, ಹಲಸಿನ ಮರ, 3 ಸೋಲಾರ್ ಬೇಲಿ ಕಂಬ ಮುರಿದು ಹಾಕಿವೆ.
ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ನಡೆಯುತ್ತಿದ್ದು, ಆನೆ ದಾಳಿಗೆ ಸ್ವಲ್ಪ ಮೊದಲಷ್ಟೇ ತಂಡ ಅಲ್ಲಿಂದ ನಿರ್ಗಮಿಸಿತ್ತು.
ಮೇ 27ರಂದು ಕೂಡ ಇವರ ತೋಟಕ್ಕೆ ನುಗ್ಗಿದ ಮರಿಯಾನೆ ಸಹಿತ ಕಾಡಾನೆ ಹಿಂಡು ದಾಳಿ ನಡೆಸಿ 125ಕ್ಕಿಂತ ಅಧಿಕ ಅಡಕೆ ಮರ ಮುರಿದು ಹಾಕಿತ್ತು.
ಬಳಿಕ ಜೂ.6ರಂದು ಕಾಡಾನೆಗಳ ಹಿಂಡು ಧರ್ಮಸ್ಥಳ ಸಮೀಪ ಕಂಡು ಬಂದಿದ್ದು, ಇದರಲ್ಲಿ ಆನೆಯೊಂದು ಬೊಳಿಯಾರಿನಲ್ಲಿ ರಿಕ್ಷಾವನ್ನು ಪುಡಿಗೈದಿತ್ತು. ಇದೇ ಆನೆಗಳ ಹಿಂಡು ಮತ್ತೆ ಚಾರ್ಮಾಡಿಯತ್ತ ಬಂದಿರುವ ಶಂಕೆ ವ್ಯಕ್ತವಾಗಿದೆ.