
ಕೋವಿಡ್ ಪಾಸಿಟಿವ್: ವ್ಯಕ್ತಿ ಸಾವು
Tuesday, June 3, 2025
ಕಾಪು: ಕಾಪು ಬೆಳ್ಳೆ ಗ್ರಾಮದ 65 ವರ್ಷದ ಪೀಟರ್ ಮಥಾಯಸ್ ಎಂಬವರು ಮಣಿಪಾಲದ ಏಒಅ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದು ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಪ್ರಥಮ ಸಾವು.
ಪೀಟರ್ ಮಥಾಯಸ್‌ರವರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮೇ.29ರಂದು ಹೈಪರ್ ಟೆನ್ಷನ್ ಚಿಕಿತ್ಸೆಗಾಗಿ ಏಒಅ ಗೆ ದಾಖಲಾಗಿದ್ದರು. ಆಗ ಕೋವಿಡ್ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ದೃಢಪಟ್ಟಿದೆ. ಜೂ. 2ರಂದು ಅವರು ಮೃತಪಟ್ಟಿದ್ದರು.
ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಇಂದು ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿದ್ದಾರೆ. ಮನೆಯ ಇತರ ಮಂದಿಗೆ ಕೋವಿಡ್ ಲಕ್ಷಣಗಳಿಲ್ಲ. ಹೆಣ ಇನ್ನೂ ಆಸ್ಪತ್ತೆಯಲ್ಲಿಯೇ ಇದೆ. 4-6-25 ರ ಬುಧವಾರ ಅಂತ್ಯ ಸಂಸ್ಕಾರ ಏರ್ಪಡಿಸಲಾಗಿದ್ದು ಕೋವಿಡ್ SOP ಅನುಸರಿಸಿ ಅಂತ್ಯ ಸಂಸ್ಕಾರ ಕೈಗೊಳ್ಳಲಾಗುವುದು ಎಂದಿದ್ದಾರೆ.