
ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಇಬ್ಬರಿಗೆ ಪ್ರಥಮ ಸ್ಥಾನ
Monday, June 30, 2025
ಕಾರ್ಕಳ: ಸಂಚಾರಿ ಕಲಾ ಪರಿಷತ್ ಬೆಂಗಳೂರು ಇವರು ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್. ಅಂಚನ್ ಮತ್ತು ಅನುಜ್ಞಾ ಎನ್. ರಾವ್ ಅವರು ಭಾಗವಹಿಸಿ ಶೇ.90 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನಿಗಳಾಗಿದ್ದಾರೆ.
ವಿದುಷಿ ಸುಶ್ಮಿತಾ ನೀರೇಶ್ವಲಾಯ ಇವರ ಕಾರ್ಕಳ ಪುಲ್ಕೇರಿ ಶಾಂತಿ ನೃತ್ಯ ನಿಕೇತನದಲ್ಲಿ ಭರತನಾಟ್ಯ ತರಬೇತಿ ಪಡೆಯುತಿದ್ದು, ಸದ್ರಿ ತರಬೇತಿ ಶಾಲೆಯ 17 ಮಂದಿ ಭರತನಾಟ್ಯ ವಿದ್ಯಾರ್ಥಿಗಳು ಈ ಬಾರಿ ಜೂನಿಯರ್ ಪರೀಕ್ಷೆ ಬರೆದಿದ್ದು ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಹಾಗೂ ಉಳಿದ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆ ಹೊಂದಿರುತ್ತಾರೆ. ಹಾಗೆಯೇ ಸೀನಿಯರ್ ವಿಭಾಗದಲ್ಲಿ ಸಮೃದ್ಧಿ ಶೆಟ್ಟಿ ಶೇ.82 ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಪ್ರಥಮ ಸ್ಥಾನಿಗಳಾದ ಅನ್ವಿ ಹೆಚ್. ಅಂಚನ್ ಜ್ಞಾನಸುಧ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅನುಜ್ಞಾ ಎನ್. ರಾವ್ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಆಗಿರುತ್ತಾರೆ.