ಸೊಸೈಟಿಯ ಮ್ಯಾನೇಜರ್ ನಿಂದ ದೋಖಾ: ಪೊಲೀಸ್ ಬಲೆಗೆ

ಸೊಸೈಟಿಯ ಮ್ಯಾನೇಜರ್ ನಿಂದ ದೋಖಾ: ಪೊಲೀಸ್ ಬಲೆಗೆ

ಮಂಗಳೂರು: ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟಿದ್ದ ಕೇಜಿಗಟ್ಟಲೆ ಚಿನ್ನಾಭರಣವನ್ನೇ ಸೊಸೈಟಿಯ ಮ್ಯಾನೇಜರ್ ಒಬ್ಬ ಎಗರಿಸಿದ್ದು ಅದನ್ನು ಬೇರೊಂದು ಸೊಸೈಟಿಯಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ದೋಖಾ ಎಸಗಿರುವ ಪ್ರಕರಣ ಮಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ದೋಖಾ ನಡೆದಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಹಕರು ತಮ್ಮ ಕಷ್ಟದಲ್ಲಿ ಅಡವಿವಿಟ್ಟಿದ್ದ ಆರೂವರೆ ಕೇಜಿ ಬಂಗಾರದ ಆಭರಣವನ್ನು ಅದೇ ಸೊಸೈಟಿಯ ಮ್ಯಾನೇಜರ್ ಪ್ರೀತೇಶ್ ಎಂಬಾತ ಕಳವುಗೈದು ಬೇರೆ ಬೇರೆ ಕಡೆ ಅಡವಿಟ್ಟಿದ್ದಾನೆಂಬ ಮಾಹಿತಿ ಲಭಿಸಿದೆ. ಸೊಸೈಟಿ ಮೇಲಿನ ನಂಬಿಕೆಯಿಂದ ಹಲವಾರು ಗ್ರಾಹಕರು ತಮ್ಮ ಅಗತ್ಯಕ್ಕಾಗಿ ಚಿನ್ನವನ್ನು ಅಡವಿಟ್ಟು ಹಣ ಸಾಲ ಪಡೆದಿದ್ದರು. ಗ್ರಾಹಕರು ಅಡವಿಟ್ಟಿದ್ದ ಆರೂವರೆ ಕೇಜಿ ಬಂಗಾರಕ್ಕೆ ಪ್ರತಿಯಾಗಿ ಸೊಸೈಟಿಯಿಂದ 3.25 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಇದೀಗ ಗ್ರಾಹಕರು ಇಟ್ಟಿದ್ದ ಬಂಗಾರವೇ ನಾಪತ್ತೆಯಾಗಿದ್ದು, ಅದನ್ನು ಎಗರಿಸಿದ ಮ್ಯಾನೇಜರ್ ತನ್ನ ಆಪ್ತರ ಮೂಲಕ ಬೇರೆ ಬೇರೆ ಸೊಸೈಟಿಗಳಲ್ಲಿ ಅಡವಿಟ್ಟು ಸಾಲ ತೆಗೆದಿದ್ದಾನೆ.

ಶಕ್ತಿನಗರದಲ್ಲೇ ಶಾಖೆ ಇರುವ ಕರಾವಳಿ ಹೆಸರಿನ ಸೊಸೈಟಿಯಲ್ಲಿ ಹಲವರ ಹೆಸರಲ್ಲಿ ಬಂಗಾರ ಅಡ ಇಟ್ಟಿರುವುದನ್ನು ಪತ್ತೆ ಮಾಡಲಾಗಿದೆ. ಅದೇ ಶಾಖೆಯಿಂದ 2200 ಗ್ರಾಮ್ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೀತೇಶ್ ಪರವಾಗಿ ಚಿನ್ನ ಇಟ್ಟು ಸಾಲ ಪಡೆದಿದ್ದ ಸರಿಪಲ್ಲ ನಿವಾಸಿ ಶೇಖ್ ಮಹಮ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೂ ಹಲವರು ಈ ವಂಚನೆಯಲ್ಲಿ ಭಾಗಿಯಾಗಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article