
ಕೋಣಾಜೆ ಗ್ರಾಮದಲ್ಲಿ ಪಿಂಚಣಿ ಅದಾಲತ್
Saturday, June 21, 2025
ಕೊಣಾಜೆ: ಹಿರಿಯ ಸದಸ್ಯರಿಗೆ ಪಿಂಚಣಿ ಪಡೆಯಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಾಲೂಕಿನ ಕೋಣಾಜೆ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸಲಾಯಿತು.
ಉಪತಹಸೀಲ್ದಾರ್ ವಿನಯ ಎಸ್. ರಾವ್ ವಿಚಾರ ಮಂಡಿಸಿದರು. ಕೊಣಾಜೆ ಪಂಚಾಯತ್ ಅಧ್ಯಕ್ಷ ಗೀತಾ ದಾಮೋದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕ ಅಕ್ಷತಾ, ಗ್ರಾಮ ಸಹಾಯಕ ಜಿತೇಂದ್ರ, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.