
ಕ್ರಿಕೆಟ್ ಬೆಟ್ಟಿಂಗ್: ಪ್ರಕರಣ ದಾಖಲು
Wednesday, June 4, 2025
ಕುಂದಾಪುರ: ಕೋಟ ಸಮೀಪ ಕೆಲವು ಮಂದಿ ಯುವಕರು ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳು ಶಿವರಾಜ್ ಹಾಗೂ ಪ್ರದೀಪ್ ಎಂದು ತಿಳಿದು ಬಂದಿದೆ. ಕೋಟ ಸಮೀಪದ ಸಾಯಿಬ್ರಾಕಟ್ಟೆ ಎಂಬಲ್ಲಿನ ರಿಕ್ಷಾ ನಿಲ್ದಾಣದ ಬಳಿ
ಈ ಆರೋಪಿಗಳು ಚಂದ್ರ ಜನ್ನಾಡಿ ಜೊತೆ ಫೋನ್ ನಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಇವರು ಕ್ರಿಕೆಟ್ ಬೆಟ್ಟಿಂಗ್ ವೆಬ್ ಸೈಟ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರನ ವಿರುದ್ಧ ಪ್ರಕರಣ ದಾಖಲಾಗಿದೆ.