ಕೇರ್ ಚಾರಿಟೇಬಲ್ ಟ್ರಸ್ಟ್ ನಿಂದ ಪುಸ್ತಕ, ಸಮವಸ್ತ್ರ ವಿತರಣೆ, ಸಾಧಕರಿಗೆ ಸನ್ಮಾನ

ಕೇರ್ ಚಾರಿಟೇಬಲ್ ಟ್ರಸ್ಟ್ ನಿಂದ ಪುಸ್ತಕ, ಸಮವಸ್ತ್ರ ವಿತರಣೆ, ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಕೇರ್ ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದಿರೆ ಇದಕ್ಕೆ ವರುಷ ತುಂಬಿದ ಪ್ರಯುಕ್ತ 175 ಮಕ್ಕಳಿಗೆ ಪಠ್ಯ ಪುಸ್ತಕ, 78 ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ತೆರೆಮರೆಯ ಸಾಧಕರಿಗೆ ಸನ್ಮಾನ ಸಮಾರಂಭವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.

ಗಂಟಾಲ್ ಕಟ್ಟೆ ನಿತ್ಯ ಸಹಾಯ ಮಾತಾ ಚಚಿ೯ನ ಧಮ೯ಗುರು ಫಾ. ರೋನಾಲ್ಡ್ ಪ್ರಕಾಶ್ ಡಿ'ಸೋಜಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಜಾತಿ, ಧಮ೯ವನ್ನು ನೋಡದೆ ಸೌಹಾರ್ದಯುತವಾಗಿ ಉತ್ತಮ ಕೆಲಸಗಳನ್ನು ಸಮಾಜ ಸೇವಕ ಅನಿಲ್ ಮೆಂಡೋನ್ಸಾ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ: ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸೀಕೊಂಡಿರುವ ಅಶ್ವಥ್, ವೆಂಕಪ್ಪ, ರಾಜೇಂದ್ರ ಜೈನ್, ಸುರೇಶ್ ಮತ್ತು ಪಿ. ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಪ್ರಾಂತ್ಯ ಶಾಲಾ ಮುಖ್ಯ ಶಿಕ್ಷಕ ಸುಧಾಕರ್, ಎಸ್ ಡಿಎಂಸಿ ಅಧ್ಯಕ್ಷ ಮಹಮ್ಮದ್ ಝೂಬಿ, ಕೇರ್ ಚಾರಿಟೇಬಲ್ ಟ್ರಸ್ಟ್ ನ ಅನಿಲ್ ರುಬೆಲ್ ಮೆಂಡೋನ್ಸಾ ಉಪಸ್ಥಿತರಿದ್ದರು.

ಗಣೇಶ್ ಬಿ ಅಳಿಯೂರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article