
ಮೂಡುಬಿದಿರೆ ಸಚಿವರಿಂದ ಅಹವಾಲು ಸ್ವೀಕಾರ
Wednesday, June 4, 2025
ಮೂಡುಬಿದಿರೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಗಮಿಸಿದ ವೇಳೆ ಸಾರ್ವಜನಿಕ ಬೇಡಿಕೆಯ ಹಲವು ಮನವಿ ಪತ್ರಗಳನ್ನು ನಾಗರಿಕರು ಸಲ್ಲಿಸಿದರು.
ಭಾರತೀಯ ರೈತಸೇನೆಯ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಹಾಗೂ ಪದಾಧಿಕಾರಿಗಳು ಮೂಡುಬಿದಿರೆ ಪೋಲಿಸ್ ವಸತಿ ಗೃಹಕ್ಕೆ ಸ್ಥಳವನ್ನು ಕಾಯ್ದಿರಿಸಿ ಪೋಲಿಸ್ ವಸತಿಗೃಹವನ್ನು ನಿರ್ಮಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಆದ್ಯತೆಯ ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿಲ್ದಾಣವನ್ನು ನಿರ್ಮಿಸಬೇಕು ಎಂಬ ಬೇಡಿಕೆ ಪತ್ರವನ್ನು ಸಲ್ಲಿಸಿದರು.
ನ್ಯಾಯವಾದಿ ಪದ್ಮಪ್ರಸಾದ್ ಜೈನ್ ಅವರು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಸಲ್ಲಿಸಿದರು.
ವಿಕಲಚೇತನರ ಬೇಡಿಕೆಯ ಕುರಿತು ಬಾಲಕೃಷ್ಣ ನಾಯಕ್ ಮನವಿ ಸಲ್ಲಿಸಿದರು. ವಿಕಲಚೇತನರ ಪೋಷಣಾ ಭತ್ಯೆ ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ. ಬಡವರ ಮನೆ ನಿರ್ಮಾಣ, ಶೌಚಾಲಯ ಧನಸಹಾಯ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.