
ಕುಂದಾಪುರ ತಾಲೂಕಿನಾದ್ಯಂತ ಭಾರೀ ಮಳೆ: ಕಮಲಶಿಲೆ, ಮಾರಣಕಟ್ಟೆ ದೇಗುಲದೊಳಗೆ ನೀರು
ಕುಂದಾಪುರ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪರಿಣಾಮ ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸುತ್ತ ನದಿ ನೀರು ಉಕ್ಕಿ ಹರಿಯುತ್ತಿದ್ದು, ದೇವಸ್ಥಾನದ ಒಳಗೆ ನೀರು ನುಗ್ಗಿದೆ.
ಕಮಲಶಿಲೆ ದೇಗುಲ ಜಲಾವೃತ:
ಭಾನುವಾರ ಸುರಿದ ಭಾರಿ ಮಳೆಗೆ ಕುಬ್ಜಾ ನದಿ ಉಕ್ಕಿ ಹರಿಯುತ್ತಿದ್ದು ಪರಿಣಾಮ ನದಿ ನೀರು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಲಾವೃತಗೊಂಡಿದೆ, ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿನ ದೇವಸ್ಥಾನ ಜಲಾವೃಗಳೊಳ್ಳುವುದು ಸಾಮಾನ್ಯ.
ಮಾರಣಕಟ್ಟೆ ದೇವಸ್ಥಾನ ಜಲಾವೃತ:
ಭಾರೀ ಮಳೆಯ ಪರಿಣಾಮ ನದಿ ಉಕ್ಕಿ ಹರಿದು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ನೀರು ನುಗ್ಗಿದೆ, ಜೊತೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವಸ್ತಗೊಂಡಿದೆ.
ಮರವಂತೆ-ಪಡುಕೋಣೆ ರಸ್ತೆ ಜಲಾವೃತ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಾತ್ರಿಯಿಡೀ ಭಾರೀ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ, ನಾಡ ಗ್ರಾಮದ ಚಿಕ್ಕಳ್ಳಿ, ಪಡುಕೋಣೆ ಸೇರಿದಂತೆ ಹಲವು ಭಾಗಗಳಲ್ಲಿ ನೆರೆ ಬಂದಿದ್ದು ಪರಿಣಾಮ ಮರವಂತೆ-ಪಡುಕೋಣೆ ರಸ್ತೆ ಜಲಾವೃತಗೊಂಡಿದೆ.
ಶಾಸಕ ಗಂಟಿಹೊಳೆ ಭೇಟಿ:
ಭಾರೀ ಮಳೆಯಿಂದಾಗಿ ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ ಎಡಮಾವಿನಹೊಳೆ ಉಕೀ ಹರಿಯುತ್ತಿದ್ದು ಸುತ್ತ ಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ನೆರೆಯ ಪರಿಣಾಮ ಹಲವು ಮನೆಗಳು, ಗದ್ದೆಗಳು ಜಲಾವೃತಗೊಂಡಿದ್ದು ಸ್ಥಳಕ್ಕೆ ಶಾಸಕ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಜೊತೆಗೆ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ.