
ಕರಾವಳಿಯಲ್ಲಿ ಭಾರೀ ಮಳೆ: ಬೆಳ್ತಂಗಡಿಯ ಪ್ರವಾಸ ತಾಣಗಳಿಗೆ ಇಂದಿನಿಂದ ಪ್ರವೇಶ ನಿಷೇಧ
Monday, June 16, 2025
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಕಳೆದ ಮೂರುದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿತ, ಮರ ಬಿಳುತ್ತಿದ್ದು ಅಪಾರ ಹಾನಿಯಾಗಿದೆ.
ಈ ನಿಟ್ಟಿನಲ್ಲಿ ಮುಂಜಾಗೃತವಾಗಿ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು, ಜಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರದೇಶಗಳಿಗೆ ಮುಂದಿನ ಆದೇಶದವರೆಗೆ ಜೂ.16 ರಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧವನ್ನು ಹೇರಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.