
ಮಧೂರು ದೇವಸ್ಥಾನ ಮಳೆಗೆ ಜಲಾವೃವೃತ
Monday, June 16, 2025
ಕಾಸರಗೋಡು: ಇಲ್ಲಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮತ್ತೆ ಮಳೆ ನೀರಿನಿಂದ ಜಲಾವೃತಗೊಂಡಿದೆ.
ಕೆಲವು ದಿನಗಳ ಹಿಂದೆ ದೇವಸ್ಥಾನದ ಅಂಗಣದೊಳಗೆ ಸುಮಾರು ಎರಡು ಅಡಿಗಳಷ್ಟು ಮಳೆ ನೀರು ತುಂಬಿತ್ತು. ಮಧುವಾಹಿನಿ ಹೊಳೆ ಉಕ್ಕಿ ಹರಿದ ಪರಿಣಾಮವಾಗಿ ದೇವಸ್ಥಾನದ ಅಂಗಣದೊಳಗೆ ಮಳೆ ನೀರು ಹರಿದಿತ್ತು. ಇದೀಗ ಮತ್ತೆ ಮಳೆ ನೀರು ದೇವಸ್ಥಾನದೊಳಗೆ ಸುಮಾರು ಒಂದೂವರೆ ಅಡಿಯಷ್ಟು ನೀರು ತುಂಬಿದ್ದು, ರಾತ್ರಿ ಮಳೆ ನೀರಿನ ಮಟ್ಟ ಇಳಿದಿದೆ.