
ನೂತನ ಅಂಚೆ ತಂತ್ರಾಂಶ ಉದ್ಘಾಟನೆ
Monday, June 30, 2025
ಕುಂದಾಪುರ: ಭಾರತೀಯ ಅಂಚೆ ಇಲಾಖೆ ವತಿಯಿಂದ ಬಿಡುಗಡೆಯಾದ ಹೊಸ ತಂತ್ರಾಂಶ ಎಪಿಟಿ-2.0 ಇದರ ಉದ್ಘಾಟನಾ ಸಮಾರಂಭವು ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆಯಿತು.
ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ನೂತನ ತಂತ್ರಾಂಶವನ್ನು ಉದ್ಘಾಟಿಸಿ ಮಾತನಾಡಿ, ಹಲವಾರು ಹೊಸ ಸೇವೆಗಳೊಂದಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯೊಂದಿಗೆ ಹೊಸ ತಂತ್ರಾಂಶ ಜನಸ್ನೇಹಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಂದಾಪುರ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್, ಉಡುಪಿ ಸಹಾಯಕ ಅಂಚೆ ಅಧಿಕ್ಷಕ ದಯಾನಂದ ದೇವಾಡಿಗ ಅವರು ಮಾತನಾಡಿದರು. ಕುಂದಾಪುರ ಪ್ರಧಾನ ಅಂಚೆ ಪಾಲಕ ಜಿ.ಎಸ್. ಮರಕಾಲ, ತಂತ್ರಜ್ಞ ಸಂದೇಶ ಕುಂದಾಪುರ, ಅಂಚೆ ಜೀವ ವಿಮೆ ವಿಭಾಗದ ಸುರೇಖ, ಸಹಾಯಕ ಅಂಚೆ ಪಾಲಕ ಸುರೇಶ್ ಮತ್ತಿತರರು, ಪ್ರಧಾನ ಅಂಚೆ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಉಪ ಅಂಚೆ ಪಾಲಕಿ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.