ಜೂ.14 ರಿಂದ ಪಿಲಿಕುಳ ಹಣ್ಣುಗಳ ಮೇಳ

ಜೂ.14 ರಿಂದ ಪಿಲಿಕುಳ ಹಣ್ಣುಗಳ ಮೇಳ

ಮಂಗಳೂರು: ರೈತರು ಹಾಗೂ ಉತ್ಪಾದಕರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಹಣ್ಣುಗಳ ಮೇಳವನ್ನು ಜೂ.14 ಮತ್ತು 15 ರಂದು ಬೆಳಗ್ಗೆ  9 ರಿಂದ ಸಂಜೆ 6 ಗಂಟೆಯವರೆಗೆ ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಆಯೋಜಿಸಿದೆ.

ಮೇಳದಲ್ಲಿ ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಉತ್ಪಾದಕರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿವಿಧ ಸಂಸ್ಥೆಗಳು ಭಾಗವಹಿಸಿ ತಮ್ಮ ಮೌಲ್ಯಾಧಾರಿತ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶ ಹೊಂದಿದ್ದಾರೆ.

ಮೇಳದ ಪ್ರಮುಖ ಆಕರ್ಷಣೆಗಳು:- ಪ್ರಾದೇಶಿಕ ಹಾಗೂ ವಿಶಿಷ್ಟ ಮಾವು, ಹಲಸು ಮತ್ತು ಇತರ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳು, ಹಲಸಿನ ಜಿಲೇಬಿ, ಗಾರಿಗೆ, ಪಾನೀಯಗಳ ಪ್ರತ್ಯಕ್ಷ ಪ್ರದರ್ಶನ ಹಾಗೂ ಮಾರಾಟ, ಔಷಧೀಯ ಗಿಡಗಳು, ಕಸಿ ಗಿಡಗಳು, ಹಣ್ಣುಗಳ ಸಸಿಗಳು, ಸಾವಯವ ತರಕಾರಿ ಬೀಜಗಳು, ಗೃಹೋಪಯೋಗಿ ವಸ್ತುಗಳು ಮತ್ತು ಕರಕುಶಲ ಉತ್ಪನ್ನಗಳು. ಈ ಮೇಳದಲ್ಲಿ ವಿವಿಧ ಸರಕಾರಿ, ಅರೆಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಹಭಾಗಿತ್ವ ವಹಿಸುತ್ತಿದ್ದು, ಸಾರ್ವಜನಿಕರಿಗೆ ನೇರವಾಗಿ ಉತ್ಪನ್ನಗಳನ್ನು ಖರೀದಿಸುವುದರೊಂದಿಗೆ ಬೆಳೆಗಾರರ ಶ್ರಮಕ್ಕೆ ನ್ಯಾಯ ದೊರಕಿಸುವ ಒಂದು ಸುಲಭ ವೇದಿಕೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಈ ಮೇಳವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article