
ಯುವತಿ ಮೇಲಿನ ಹಲ್ಲೆ: ದಲಿತ ಹಕ್ಕುಗಳ ಸಮಿತಿ ಖಂಡನೆ
ಉಡುಪಿ: ಕುಂದಾಪುರ ಬಳಿಯ ಮಾವಿನಕಟ್ಟೆ ಮೆಡಿಕಲ್ ಶಾಪ್‌ನಲ್ಲಿ ಚಿಲ್ಲರೆ ಹಣದ ವಿಷಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ದಲಿತ ಯುವತಿ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಖಂಡಿಸಿದೆ.
ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಯುವತಿ ಹಾಗೂ ಆಕೆಯ ಹೆತ್ತವರನ್ನು ಭೇಟಿಯಾದ ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ನೇತೃತ್ವದ ನಿಯೋಗ, ಯುವತಿಗೆ ಸಾಂತ್ವನ ಹೇಳಿ ಧೈರ್ಯ ನೀಡಿತು. ಮಾತ್ರವಲ್ಲದೆ, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿತು.
ಘಟನೆ ನಡೆದ ಬೆನ್ನಿಗೇ ವಿಳಂಬ ಮಾಡದೆ ಆರೋಪಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ ಪೊಲೀಸ್ ಅಧಿಕಾರಿಗಳ ಕರ್ತವ್ಯ ಪಾಲನೆಯನ್ನು ಡಿಎಚ್‌ಎಸ್. ಅಭಿನಂದಿಸಿತು.
ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿ ಸಹ ಸಂಚಾಲಕ ರವಿ ವಿ.ಎಂ., ಸಂಹಿತ್, ಸುಜಯ್ ಬಳ್ಕೂರು, ವಿಜಯ್ ಕುಮಾರ್ ಬಳ್ಕೂರು, ಮಂಜುನಾಥ್ ಬಳ್ಕೂರು, ಸಿಐಟಿಯು ನಾಯಕರಾದ ಎಚ್. ನರಸಿಂಹ ಹಾಗೂ ಚಂದ್ರಶೇಖರ ವಿ. ಇದ್ದರು.
ಜನವಾದಿ ಸಂಘಟನೆ ಭೇಟಿ:
ಜನವಾದಿ ಮಹಿಳಾ ಸಂಘಟನೆ ಮತ್ತು ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ನಿಯೋಗ ಕೂಡಾ ಸಂತ್ರಸ್ತೆ ಲಕ್ಷ್ಮಿ ಮನೆಗೆ ಭೇಟಿ ನೀಡಿತು. ಮುಂದಿನ ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದಾಗಿ ನಿಯೋಗ ಭರವಸೆ ನೀಡಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ನಾಗರತ್ನ ನಾಡ, ಶೀಲಾವತಿ ಇದ್ದರು. ದಲಿತ ಮುಖಂಡರಾದ ಜಯಕುಮಾರ್, ಶಶಿ ಬಳ್ಕೂರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಇದ್ದರು.