
ನಾಳೆಯಿಂದ ಜಾಗತಿಕ ಯುವ ಶೃಂಗ ಸಭೆ 2025
ಮಂಗಳೂರು: ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಜೂ.4ರಿಂದ 6ರವರೆಗೆ ಯೆನೆಪೋಯ ವಿವಿಯಲ್ಲಿ ಜಾಗತಿಕ ಯುವ ಶೃಂಗ ಸಭೆ 2025 ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಲಾಗಿದೆ.
ಜೂ.4ರಂದು ಸಂಜೆ 5.30ಕ್ಕೆ ಯೆನೆಪೋಯ ವಿವಿ ಯೆಂಡುರೆನ್ಸ್ ಜೋನ್ನಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗೂಂಡೂರಾವ್ ಚಾಲನೆ ನೀಡಲಿದ್ದಾರೆ. ಯೆನೆಪೋಯ ವಿವಿ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲ ಕುಂಞಿ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್ ಡಿ., ಯೆನೆಪೋಯ ವಿವಿ ಕುಲಪತಿ ಡಾ.ಎಂ. ವಿಜಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್, ಯೆನೆಪೋಯ ವಿವಿಯ ಸಹ ಉಪ ಕುಲಪತಿ ಡಾ. ಶ್ರೀಪತಿ ರಾವ್, ರಿಜಿಸ್ಟ್ರಾರ್ ಡಾ.ಕೆ.ಎಸ್. ಗಂಗಾಧರ ಸೋಮಯಾಜಿ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಉಪಾಧ್ಯಾಯ, ಜಾಗತಿಕ ಯುವ ಶೃಂಗಸಭೆಯ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಯೆನೆಪೋಯ ವಿವಿ ಸಹಾಯಕ ವೈದ್ಯಕೀಯ ಅಽಕ್ಷಕ ಡಾ. ನಾಗರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಸರಕಾರ ಆಯೋಜಿಸಿರುವ ಮೊದಲ ಅಂತಾರಾಷ್ಟ್ರೀಯ ಯುವ ಸಮ್ಮೇಳನ ಇದಾಗಿದೆ. ದೇಶದ ವಿವಿಧ ಕಡೆಗಳಿಂದ ಸುಮಾರು 650 ಪ್ರತಿನಿಽಗಳು ಭಾಗವಹಿಸಲಿದ್ದು, 15 ದೇಶಗಳ ಯುವ ಪ್ರತಿನಿಽಗಳು, ಜಾಗತಿಕ ವಿನಿಯಮಕ್ಕಾಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಸಾಮಾಜಿಕ ಉಮಶೀಲತೆ ಮತ್ತು ನಾವೀನ್ಯತೆ, ಯುವ ನೀತಿ ಮತ್ತು ವಕಾಲತ್ತು, ಹಸಿರು ಭಾರತ ಮತ್ತು ಪರಿಸರ ಕ್ರಿಯೆ, ಸಾರ್ವಜನಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಯುವಕರು, ಶಾಂತಿ ನಿರ್ಮಾಣ ಮತ್ತು ಸಂಘರ್ಷ ಪರಿಹಾರದಲ್ಲಿ ಯುವಕರು, ಹವಾಮಾನ ಬದಲಾವಣೆ ಮತ್ತು ಪರಿಸರ ಸಂಕ್ಷಣೆ ಮೊದಲಾದ ವಿಷಯಗಳಲ್ಲಿ ಚರ್ಚೆ ನಡೆಯಲಿದೆ. ‘ಐಡಿಯಾವರ್ಸ್- ನವ ಭಾರತಕ್ಕಾಗಿ ಯುವ ನಾವೀನ್ಯತೆ’ ಎಂಬ ವಿಷಯದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದ.ಕ. ಜಿಲ್ಲಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಯೆನೆಪೋಯ ವಿವಿ ಪ್ರಾಧ್ಯಾಪಕ ಡಾ. ಮುಹಮ್ಮದ್ ಗುತ್ತಿಗಾರು ಉಪಸ್ಥಿತರಿದ್ದರು.