ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿನ ಕೋಮುಗಲಭೆಯನ್ನು ಯಾಕೆ ತಡೆದಿಲ್ಲ?: ಮಮತಾ ಗಟ್ಟಿ ಪ್ರಶ್ನೆ

ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿನ ಕೋಮುಗಲಭೆಯನ್ನು ಯಾಕೆ ತಡೆದಿಲ್ಲ?: ಮಮತಾ ಗಟ್ಟಿ ಪ್ರಶ್ನೆ


ಮಂಗಳೂರು: ಪುತ್ತೂರಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲೆಯ ಮೇಲೆ ಪ್ರೀತಿ ಇದ್ದಿದ್ದರೆ ಇಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ತಡೆಯಬಹುದಿತ್ತು ಆದರೆ ಯಾಕೆ ತಡೆದಿಲ್ಲ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನಿಸಿದರು.

ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಶೋಭಾ ಕರಂದ್ಲಾಜೆ ಅವರು ನಾನು ಪುತ್ತೂರಿನಲ್ಲಿ ಹುಟ್ಟಿ ಬೆಳೆದವಳು ಆಗಲೂ ಇಲ್ಲಿ ಕೋಮುಗಲಭೆ ಇತ್ತು ಎಂದು ಹೇಳುವವರು, ಇಲ್ಲಿಯ ಜನರಿಂದ ಓಟು ಪಡೆದು ಶಾಸಕಿಯಾಗಿ ಸಂಸದೆಯಾಗಿ, ರಾಜ್ಯ ಸಚಿವೆಯಾಗಿ, ಕೇಂದ್ರ ಸಚಿವೆಯಾಗಿದ್ದಾರೆ. ಮೊದಲು ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಅವರದೇ ಸರ್ಕಾರ ಇತ್ತು ಈಗ ಕೇಂದ್ರ ಸಚಿವೆಯಾಗಿ ಅವರದೇ ಸರ್ಕಾರವಿದೆ ಯಾಕೆ ಅವರಿಗೆ ಇಲ್ಲಿ ಕೋಮುಗಲಭೆ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಶೋಭಾ ಕರಂದ್ಲಾಜೆ ಅವರು ರಚನಾತ್ಮಕವಾಗಿ, ರಾಜಕೀಯವಾಗಿ ಮಾತನಾಡುವುದು ಬಿಟ್ಟರೆ ಬೇರೆ ಏನನ್ನೂ ಮಾಡುವುದಿಲ್ಲ. ಮೊದಲು ಸ್ಥಿತಿಯಲ್ಲಿ ಈಗ ಅವರ ಕುಟುಂಬ ಇಲ್ಲ. ಕೋಟ್ಯಾಧಿಪತಿಗಳಾಗಿದ್ದಾರೆ, ಅವರ ಕುಟುಂಬ ಸಂತೋಷದಿಂದ ಇದೆ. ಈ ರೀತಿಯ ಹೇಳಿಕೆಗಳನ್ನು ನೀಡುವುದರಿಂದ ಜಿಲ್ಲೆಯ ಬಡ ಸಮಾನ್ಯ ಕಾರ್ಯಕರ್ತರನ್ನು ಪ್ರಚೋಧಿಸುತ್ತಿದ್ದಾರೆ ಎಂದರು.

ದಕ್ಷ ಅಧಿಕಾರಿಗಳನ್ನು ಬೆಂಬಲಿಸಿ:

ಜಿಲ್ಲೆಯಲ್ಲಿ ಕೋಮುಗಲಭೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನೂತನವಾಗಿ ಜಿಲ್ಲೆಗೆ ಇಬ್ಬರು ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ಈ ಅಧಿಕಾರಿಗಳು ಕೋಮುವಿರೋಧಿ ಭಾಷಣ ಮಾಡುವವರ ವಿರುದ್ಧ ದೂರು ದಾಖಲಿಸಿ, ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅವರನ್ನು ಬೆಂಬಲಿಸಬೇಕು. ಅದನ್ನು ಬಿಟ್ಟು ವಿರೋಧಿಸುವುದಲ್ಲ. ಸುಹಾಸ್ ಶೆಟ್ಟಿ ಹತ್ಯೆ ಸಂದರ್ಭ ನಾನು ಜಿಲ್ಲೆಗೆ ಬಂದಿದ್ದೇನೆ. ನಾನು ಮಾತನಾಡಿದ್ದೇನೆ. ನನ್ನನ್ನು ತಾಕತ್ತು ಇದ್ದರೆ ಬಂಧಿಸಿ ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕುವುದಲ್ಲ. ಇದು ಸೌಜನ್ಯವಲ್ಲ ಎಂದು ಹೇಳಿದರು.

ನಮ್ಮ ಗ್ರಾಮ ಪಂಚಾಯತ್ ಸದಸ್ಯೆ ಕೂಡ ಸಂವಿಧಾನಕ್ಕೆ ಗೌರವ ಸಲ್ಲಿಸುತ್ತಾರೆ ಆದರೆ ಇವರ ಅತ್ಯಂತ ಕೆಳ ಮಟ್ಟದಲ್ಲಿ ಮಾತನಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಎಲ್ಲಾ ಸಂದರ್ಭದಲ್ಲಿಯೂ ಇಲ್ಲಿಗೆ ಬಂದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಪ್ರಾಕೃತಿಕ ವಿಕೋಪವಾದ ಸಂದರ್ಭದಲ್ಲಿ ಇಲ್ಲಿಗೆ ಬಂದು ಸ್ಥಳಗಳಿಗೆ ಭೇಟಿ ನೀಡಿ ಜೀವ ಹಾನಿಯಾದ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ಮಾತ್ರವಲ್ಲ ಜಿಲ್ಲೆಯ ಅನೇಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಅವರು ಅವರ ಸ್ಥಾನಕ್ಕೆ ಎಲಿಕ್ಯಾಪ್ಟರ್‌ನಲ್ಲಿ ಕೂಡ ಬರಬಹುದಿತ್ತು ಆದರೆ ಬರಲಿಲ್ಲ. ಕೇವಲ ಮಾಧ್ಯಮದ ಎದುರು ಮಾತನಾಡುತ್ತಾರೆ ಎಂದು ಆರೋಪಿಸಿದರು.

ವಿದೇಶದಿಂದ ಬರುವ ಹಣವನ್ನು ಯಾಕೆ ತಡೆಯುತ್ತಿಲ್ಲ:

ಜಿಲ್ಲೆಯ ಯು.ಟಿ. ಖಾದರ್ ಅವರ ಕ್ಷೇತ್ರ ಉಳ್ಳಾಲಕ್ಕೆ ದುಬೈ, ಸೌದಿ ಹಾಗೂ ಕೇರಳದಿಂದ ಹಲಾವ ಹಣ ಬರುತ್ತಿದೆ. ಆ ಹಣ ಅಲ್ಲಿಂದ ಬೇರೆಡೆಗೆ ಹಂಚಿಕೆಯಾಗುತ್ತದೆ ಎಂದು ಹೇಳುವವರು ಈಗ ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ. ಈಗಾಗಲೇ ವಿದೇಶಿ ವಿನಿಮಯ ನಿರ್ವಾಹಣ ಕಾಯ್ದೆ ಮತ್ತು ಅಕ್ರಮ ಹಣ ನಿಷೇಧ ಕಾಯ್ಕೆ ಇದ್ದು ಅಕ್ರಮವಾಗಿ ಬರುವ ಹಣವನ್ನು ಯಾಕೆ ತಡೆಯುತ್ತಿಲ್ಲ. ಅಕ್ರಮವಾಗಿ ಬರುವ ಹಣವನ್ನು ತಡೆಯಲು ಆಗದಿದ್ದಲ್ಲಿ ಸಚಿವೆ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು.

ನಿಮ್ಮ ಚಾರ್ವಕ ಗ್ರಾಮದಲ್ಲಿ ಸರ್ವೆ ಮಾಡಿಸಿ:

ಶೋಭಾ ಕರಂದ್ಲಾಜೆ ಅವರು ರಾಜ್ಯದ ಪಂಚ ಗ್ಯಾರಂಟಿಯ ಬಗ್ಗೆ ಮಾತನಾಡಿ ಅದು ಸುಳ್ಳು, ನಮ್ಮ ತೆರಿಗೆ ಹಣದಿಂದ ಗ್ಯಾರಂಟಿಗೆ ಹಣ ನೀಡುತ್ತಿದ್ದಾರೆ ಎಂಬುವುದಾಗಿ ಮಾತನಾಡುತ್ತಾರೆ. ಹಾಗಾದರೆ ಯಾಕೆ ಇವರ ಸರ್ಕಾರ ಇರುವಾಗ ಈ ಗ್ಯಾರಂಟಿಗಳನ್ನು ಜಾರಿಗೆ ತರಲಿಲ್ಲ. ಈಗ ಯಾಕೆ ಬೇರೆ ರಾಜ್ಯಗಳಲ್ಲಿ ನಮ್ಮನ್ನೇ ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಕುಟುಂಬಗಳ ಮನೆ ಬೆಳಗುತ್ತಿದೆ. ನಿಮಗೆ ಸಂದೇಹವಿದ್ದಲ್ಲಿ ನಿಮ್ಮ ಚಾರ್ವಕ ಗ್ರಾಮದವನ್ನು ನಿಮ್ಮ ಕಾರ್ತಕರ್ತರಿಂದ ಸರ್ವೆ ಮಾಡಿಸಿ ಎಂದು ಸವಾಲು ಎಸೆದರು.

ಮೂಡಾದ ಅಧ್ಯಕ್ಷ ಸದಾಶಿವ ಮುಳ್ಳಾಲ, ಪ್ರಮುಖರಾದ ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ರೋಪಾ ಚೇತನ್, ಅಪ್ಪಿ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article