ನೀಟ್ 2025: ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಖಿಲ್ ಸೊನ್ನದ್‌ಗೆ ದಕ್ಷಿಣ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ

ನೀಟ್ 2025: ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಖಿಲ್ ಸೊನ್ನದ್‌ಗೆ ದಕ್ಷಿಣ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ


ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ಹಾಗೂ ದಕ್ಷಿಣ ಭಾರತ ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು.

ಅವರು ಇಂದು ನಗರದ ಕೋಡಿಯಲ್‌ಬೈಲಿನಲ್ಲಿರುವ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ.99ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಲೋಕದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ನೀಟ್ 2025ರಲ್ಲಿ 601 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಭಾರತದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.1.43ರಷ್ಟು ಎಕ್ಸ್‌ಪರ್ಟ್‌ನ ವಿದ್ಯಾರ್ಥಿಗಳಾಗಿದ್ದಾರೆ. ಇದೊಂದು ಅಭೂತಪೂರ್ವ ಸಾಧನೆಯಾಗಿದೆ ಎಂದರು.

ಕಾಲೇಜಿನ 7 ವಿದ್ಯಾರ್ಥಿಗಳು 625ಕ್ಕಿಂತ ಅಧಿಕ ಅಂಕವನ್ನು ಪಡೆದರೆ, 19 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ, 57 ವಿದ್ಯಾರ್ಥಿಗಳು 575ಕ್ಕಿಂತ ಅಧಿಕ ಅಂಕ, 81 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕ, 146 ವಿದ್ಯಾರ್ಥಿಗಳು 525ಕ್ಕಿಂತ ಅಧಿಕ ಅಂಕ, 233 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ, 324 ವಿದ್ಯಾರ್ಥಿಗಳು 475ಕ್ಕಿಂತ ಅಧಿಕ ಅಂಕ, 440 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕ, 567 ವಿದ್ಯಾರ್ಥಿಗಳು 425ಕ್ಕಿಂತ ಅಧಿಕ ಅಂಕ, 684 ವಿದ್ಯಾರ್ಥಿಗಳು 400ಕ್ಕಿಂತ ಅಧಿಕ ಅಂಕ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಕಾಲೇಜಿನ 10 ವಿದ್ಯಾರ್ಥಿಗಳು ಮೊದಲ 500 ರ‍್ಯಾಂಕ್‌ನಲ್ಲಿ ಸ್ಥಾನ ಪಡೆದರೆ, 15 ವಿದ್ಯಾರ್ಥಿಗಳು ಮೊದಲ ಒಂದು ಸಾವಿರ ರ‍್ಯಾಂಕ್ ಹಾಗೂ 24 ವಿದ್ಯಾರ್ಥಿಗಳು ಮೊದಲ ಎರಡು ಸಾವಿರ ರ‍್ಯಾಂಕ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ನೀಟ್ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ನಿಖಿಲ್ ಸೊನ್ನದ್ ಅವರು ಒಟ್ಟು ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 670 ಅಂಕವನ್ನು ಪಡೆದಿದ್ದಾರೆ. ಬೋರ್ಡ್ ಪರೀಕ್ಷೆಯಲ್ಲಿ ಮೂರು ವಿಷಯದಲ್ಲಿ ತಲಾ 100 ಅಂಕ ಪಡೆದಿದ್ದ ನಿಖಿಲ್, ಸಿಇಟಿ ಪರೀಕ್ಷೆಯಲ್ಲಿ ಕೃಷಿಯಲ್ಲಿ ೮ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 26, ಪಶು ವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 51, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 61ನೇ ರ‍್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 65 ಪಡೆದಿದ್ದರು ಎಂದರು.

648 ಅಂಕ ಪಡೆದ ನಿಧಿ ಕೆ.ಜಿ. ಅಖಿಲ ಭಾರತ ಮಟ್ಟದ ಜನರಲ್ ಮೆರಿಟ್‌ನಲ್ಲಿ 84ನೇ ರ‍್ಯಾಂಕ್ ಪಡೆದರೆ, 636 ಅಂಕ ಪಡೆದ ಸಾಯಿಶ್ ಶ್ರವಣ ಪಂಡಿತ್ 159ನೇ ರ‍್ಯಾಂಕ್, 632ಅಂಕ ಪಡೆದ ಶ್ರೇಯಸ್ ಮಲ್ಲಪ್ಪ ಮಹಾಲಿಂಗಪುರ 214ನೇ ರ‍್ಯಾಂಕ್, 631 ಅಂಕ ಪಡೆದ ಸುಚಿತ್ ಪಿ. ಪ್ರಸಾದ್ 226ನೇ ರ‍್ಯಾಂಕ್, 630 ಅಂಕ ಪಡೆದ ವರುಣ್ ಸಿದ್ದಪ್ಪ ಗೌಡರ್ 241ನೇ ರ‍್ಯಾಂಕ್, 626 ಅಂಕ ಪಡೆದ ಸಿದ್ದೇಶ್ ಬಿ. ಡಮ್ಮಳ್ಳಿ 317ನೇ ರ‍್ಯಾಂಕ್, 623 ಅಂಕ ಪಡೆದ ಪೂಜಾ 386ನೇ ರ‍್ಯಾಂಕ್, 620 ಅಂಕ ಪಡೆದ ವಚನ ಎಲ್. ಎ. 455ನೇ ರ‍್ಯಾಂಕ್, 619 ಅಂಕ ಪಡೆದ ಮನೀಶ್ ಎಲ್. 486ನೇ ರ‍್ಯಾಂಕ್, 617 ಅಂಕ ಪಡೆದ ಚರಣ್ ಗೌಡ ಎಂ. 549ನೇ ರ‍್ಯಾಂಕ್, 617 ಅಂಕ ಪಡೆದ ಕೆ.ಹನನ್ ಅಬ್ದುಲ್ ರೆಹಮಾನ್ 543ನೇ ರ‍್ಯಾಂಕ್, 661 ಅಂಕ ಪಡೆದ ಎನ್.ಬಿ. ಸಾನಿಕಾ 771ನೇ ರ‍್ಯಾಂಕ್, 607 ಅಂಕ ಪಡೆದ ಮನ್ವಿತ್ ವಿಶಾಲ್ ಎಸ್.ಆರ್. 937ನೇ ರ‍್ಯಾಂಕ್, 606 ಅಂಕ ಪಡೆದ ವಚನಾ ಅಲ್ಲಮಪ್ರಭು ಬಾಗೋಡಿ 994ನೇ ರ‍್ಯಾಂಕ್, 603 ಅಂಕ ಪಡೆದ ತುಷಾರ್ ಆರ್.ಭಟ್ 1175ನೇ ರ‍್ಯಾಂಕ್, 601 ಅಂಕ ಪಡೆದ ಚೈತನ್ಯ ಟಿ. ಪಾಟೀಲ್ 1298ನೇ ರ‍್ಯಾಂಕ್, 601 ಅಂಕ ಪಡೆದ ಸಾಯಿ ಲಕ್ಷ್ಮೀನಾರಾಯಣ 1316ನೇ ರ‍್ಯಾಂಕ್, 601 ಅಂಕ ಪಡೆದ ಯೋಗಿತ್ ಗೌಡ ಎಚ್.ವಿ. 1320ನೇ ರ‍್ಯಾಂಕ್, 599 ಅಂಕ ಪಡೆದ ಯಶಸ್ ಗೌಡ ಎಚ್.ಪಿ. 1481ನೇ ರ‍್ಯಾಂಕ್, 598 ಅಂಕ ಪಡೆದ ನಿನಾದ ಕೃಷ್ಣ ಲಷ್ಕರಿ 1494ನೇ ರ‍್ಯಾಂಕ್, 597 ಅಂಕ ಪಡೆದ ಲಕ್ಷ್ಯ ಎಲ್. ಪೂಜಾರ್ 1554ನೇ ರ‍್ಯಾಂಕ್, 594 ಅಂಕ ಪಡೆದ ಶಿವನಗೌಡ ಎಸ್. ಪಾಟೀಲ್ 1802ನೇ ರ‍್ಯಾಂಕ್, 593 ಅಂಕ ಪಡೆದ ಪ್ರಜ್ವಲ್ ಎನ್.ಆರ್. 1929ನೇ ರ‍್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ಅರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಪ್ರಾಂಶುಪಾಲರುಗಳಾದ ಡಾ. ಎನ್.ಕೆ. ವಿಜಯನ್, ಪ್ರೊ. ರಾಮಚಂದ್ರ ಭಟ್, ಶೈಕ್ಷಣಿಕ ವಿಭಾಗದ ಉಪಪ್ರಾಆಂಸುಪಾಲ ಪ್ರೊ. ಸುಬ್ರಹ್ಮಣ್ಯ ಉಡುಪ, ಎಐಸಿ ವಿಭಾಗದ ಮುಖ್ಯಸ್ಥ ಪ್ರೊ. ಶ್ಯಾಮ್‌ಪ್ರಸಾದ್, ಶೈಕ್ಷಣಿಕ ವಿಭಾಗದ ಸಲಹೆಗಾರ ಪ್ರೊ. ವಿನಯ್ ಕುಮಾರ್, ಕೋಚಿಂಗ್ ಸಂಯೋಜಕರುಗಳಾದ ಗುರುದತ್ತ್, ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article