
8ನೇ ಕಿಂಗ್ಸ್ ಚೆಸ್ ಟ್ರೋಫಿ: ಮಂಗಳೂರಿನಲ್ಲಿ ಅಂತರ್ ಜಿಲ್ಲಾ ಚೆಸ್ ಸ್ಪರ್ಧೆ
ಮಂಗಳೂರು: ಕಿಂಗ್ಸ್ ಚೆಸ್ ಅಕಾಡೆಮಿ, ಮಂಗಳೂರು ಇವರ ವತಿಯಿಂದ ಜೂ.22 ರಂದು ಮಂಗಳೂರಿನ ಬಾಲಂಭಟ್ ಹಾಲ್‌ನಲ್ಲಿ 8ನೇ ಕಿಂಗ್ಸ್ ಚೆಸ್ ಟ್ರೋಫಿ-ಅಂತರ್ ಜಿಲ್ಲಾ ಓಪನ್ ಹಾಗೂ ಮಕ್ಕಳ ಚೆಸ್ ಟೂರ್ನಮೆಂಟ್’ ನಡೆಯಲಿದೆ.
ಈ ಚೆಸ್ ಟೂರ್ನಮೆಂಟ್‌ನಲ್ಲಿ ವಿವಿಧ ವಿಭಾಗಗಳಾದ ಯು-7, ಯು-9, ಯು-11, ಯು-14, ಯು-16 ಮತ್ತು ಓಪನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಹಾಗೂ ಚೆಸ್ ಆಸಕ್ತರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ, ಉತ್ತಮ ಸ್ಪರ್ಧಿಗಳಿಗೆ ಟ್ರೋಫಿ ಹಾಗೂ ಪಾರಿತೋಪಿಕಗಳನ್ನು ನೀಡಲಾಗುವುದು. ಚೆಸ್ ಆಟದ ಪ್ರಚುರತೆಗೆ ಸಹಕಾರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತರು ಜೂ.21 ರ ಸಂಜೆ 5 ಗಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರವೀಣ್ ಕಾಮತ್ ಮೊ.ನಂ.70190880 ಅಥವಾ ಮೇಲ್ kings chessman galore agnail.com ನ್ನು ಸಂಪರ್ಕಿಸಬಹುಗಾಗಿದೆ.