ಕ್ರಿಮಿನಲ್‌ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ

ಕ್ರಿಮಿನಲ್‌ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ, ಕೊಲೆ ಪ್ರಕರಣಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಆರೋಪಿಗಳಿಗೆ ಮತ್ತು ಆರೋಪಿಗಳಿಗೆ ಸಹಕಾರ ಮಾಡುವ ಎಲ್ಲರಿಗೂ ಇದು ಎಚ್ಚರಿಕೆ. ಎಲ್ಲಾ ದೊಡ್ಡವರಿಗೆ, ಆರೋಪಿಗಳ ಮನೆಯಲ್ಲಿರುವವರು, ಗೆಳೆಯರು, ಸಂಬಂಧಿಕರಿಗೆ, ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. 

ಯಾವುದೇ ಅಪರಾಧ ಮಾಡಿದ ಆರೋಪಿ ನಿಮ್ಮ ಮನೆಯಲ್ಲಿದ್ದರೂ ಅವರಿಗೆ ಆಶ್ರಯ, ಕಾರು, ದುಡ್ಡು, ಫೋನ್ ಕೊಡೋದು ಅಪರಾಧ. ಯಾವ ಊರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ, ಆದರೆ ನಾವು ಮಾತ್ರ ಅವನನ್ನು ಆರೋಪಿ ಅಂತಾನೆ ಹೇಳುತ್ತೇವೆ. ನಮ್ಮ ಬಿಎನ್ ಎಸ್ ಅಡಿಯಲ್ಲಿ ಅದು ಕೂಡ ಒಂದು ಅಪರಾಧ ಎಂದು ಸುಧೀರ್ ರೆಡ್ಡಿ ಹೇಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article