
ಸೋಮೇಶ್ವರ ದೇವಾಲಯದಲ್ಲಿ ದ.ಕ ಕನ್ನಡ ಸಂಸದರ ನೇತೃತ್ವದಲ್ಲಿ ಯೋಗ ವಿದ್ ಯೋಧ ದಿನಾಚರಣೆ
Saturday, June 21, 2025
ಮಂಗಳೂರು: ದ.ಕ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಯೋಗ ವಿದ್ ಯೋಧ ಎಂಬ ಅಂತರಾಷ್ಟ್ರೀಯ ಯೋಗ ದಿನ ಇಂದು ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.
ಬಳಿಕ ಮಾತನಾಡಿದ ಸಂಸದರು, ಸೋಮನಾಥನ ಆಶಿರ್ವಾದದಿಂದ ಯೋಗ ಕೂಡಿ ಬಂದರೆ ಎಲ್ಲವೂ ಸಫಲವಾಗುತ್ತದೆ, ನಾವು ಮಾಡುವ ಪ್ರಯತ್ನ ಮುಖ್ಯವಾಗಿ ದೆ. ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಯೋಗವನ್ನು ಜಗದಗಲಕ್ಕೆ ಕೊಂಡೊಯ್ಯಿದಕ್ಕೆ ಅಭಿನಂದೊಸಿದರು. ಈ ದಿನ ಒಂದು ದಿನಕ್ಕೆ ಸಿಮಿತವಾಗದೆ ನಮ್ಮ ತುಳುನಾಡನ್ನು ಜಗತ್ತಿದೆ ಪರಿಚಯಮಾಡಿಕೊಡುತಾಗಲಿ ಎಂದರು.
ನಮ್ಮೆಲರ ಆರಾಧ್ಯ ಮೂರ್ತಿ ಸೋಮೇಶ್ವರನ ಆಶೀರ್ವಾದವನ್ನು ಬೇಡುತ್ತ ಯೋಗ ವಿಥ್ ಯೋಧ ಎಂಬ ಕಾರ್ಯಕ್ರಮವನ್ನು ಕಳೆದ ಬಾರಿ ಪ್ರಾರಂಭಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಈ ರಾಜ್ಯದ ಅಥವಾ ದೇಶದ ಎಲ್ಲ ಆಯಾಮಗಳಿಂದ ನಂಬರ್ 1 ಆಗುವಂತಹ ಯೋಗ್ಯತೆವಿದೆ ಆ ಯೋಗ್ಯತೆಗೆ ಯೋಗ ಕೂಡಿ ಬರಬೇಕಾದರೆ ಜನರು ಮನಸು ಮಾಡಬೇಕು ನಮ್ಮೆಲರ ಸಂಕಲ್ಪ ಶಕ್ತಿ ಸರಕಾರಕ್ಕೆ ಸರಕಾರೇತರ ಸಂಸ್ಥೆಗಳಿಗೆ ತಲುಪಬೇಕು ಆಗ ಮಾತ್ರ ಕರಾವಳಿ ಕರ್ನಾಟಕ. ತುಳುನಾಡು ಇದು ಒಂದು ಸಾಧ್ಯತೆಗಳ ಸಾಗರ ಎಂದು ನಂಬಿದ್ದು ಸಾಧ್ಯತೆಗನ್ನು ಸಹಕಾರಗೊಳಿಸಲು ಎಲ್ಲರ ಸಂಕಲ್ಪ ಶಕ್ತಿ ಅಗತ್ಯವಿದ್ದು ಭಗವಂತನ ಆಶೀರ್ವಾದದ ಅಗತ್ಯವಿದೆ ಎಂದರು.
ಆ ಕಾರಣಗಳಿಂದ ಯೋಗ ವಿಥ್ ಯೋಧ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದು ಕರಾವಳಿ ಭಾಗದ ಪ್ರವತ್ಸೋದ್ಯಮ ಕ್ಷೇತ್ರಗಳಲ್ಲಿ ಮಾಡಬೇಕೆಂಬ ಯೋಚನೆಯಿದ್ದು ಕಳೆದ ಬಾರಿ ಸಸಿಹಿತ್ಲು ವಿನಲ್ಲಿ ನಡೆಸಿದ್ದೇವೆಂದು ಹೇಳಿದರು. ಸಸಿಹಿತ್ಲು ಏಷ್ಯಾ ಖಂಡದಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್‌ಗೆ ಅತ್ಯಂತ ಬೆಸ್ಟ್ ಲೊಕೇಶನ್ ಎಂದು ಹೇಳಿದ್ದು ಆದರೆ ಈ ಬಾರಿ ಸೋಮನಾಥ ಕ್ಷೇತ್ರವನ್ನು ಗುರುತಿಸಿದ್ದು ಯಾಕೆಂದರೆ ಗುಜರಾತಿನ ಸೋಮನಾಥ ಕ್ಷೇತ್ರದಲ್ಲಿ ಭಾರತದ ಪುನರುತ್ಥಾನವಾಗಿದೆ ಎಂದರು.
ಸರದಾರ್ ವಲ್ಲಭಾಯಿ ಪಟೇಲ್ ಅವರು ಭಾರತದ ಸ್ವತಂತ್ರ ವಾದ ಸಂದರ್ಭದಲ್ಲಿ ಗುಜರಾತಿನ ಸೋಮನಾಥ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಆ ಸೋಮನಾಥ ಆಶೀರ್ವಾದದಿಂದ ಈ ದೇಶ ಅಖಂಡವಾಗಿದೆ ಎಂದರು.ಮತ್ತು ಈ ದೇಶ ಸ್ವಾತಂತ್ರದ ಸಂದರ್ಭದಲ್ಲಿ ಒಂದು ಪುನರುತ್ಥಾನದ ಪ್ರಕ್ರಿಯೆ ಆ ಗುಜರಾತಿನ ಸೋಮನಾಥ ಕ್ಷೇತ್ರದಿಂದ ಪ್ರಾರಂಭವಾಗಿದ್ದು ಅದೇ ರೀತಿ ಗುಜರಾತಿನ ಸೋಮನಾಥ ಕ್ಷೇತ್ರದಿಂದ ಕರಾವಳಿಯ ಸೋಮನಾಥನವರೆಗೆ ಹೇಗೆ ಹೆಮ್ಮೆಯ ಪ್ರಧಾನ ಮಂತ್ರಿಯನ್ನು ಆಶೀರ್ವಾದ ಮಾಡಿದರೋ ಅದೇ ರೀತಿ ಸೋಮೇಶ್ವರದ ಸೋಮನಾಥ ಈ ಕರಾವಳಿ ಕರ್ನಾಟಕದ ತುಳುನಾಡಿನ ಮಂಗಳೂರಿನ ಸಾಧ್ಯತೆಯನ್ನು ಅನಾವರಣ ಗೊಳಿಸಲು ನಮಗೆಲ್ಲರಿಗೆ ಶಕ್ತಿಯನ್ನು, ಪ್ರೇರಣೆಯನ್ನು ನೀಡಲಿ ಮನಸಿಗೆ ಸಂಕಲ್ಪ ಮಾಡುವಂತೆಯಾಗಲಿ, ಕರಾವಳಿ ಕರ್ನಾಟಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆಯುವಂತಾಗಲಿ ಆ ಯೋಗ್ಯತೆ ನಮ್ಮಲಿದೆ ಎಂದು ಹೇಳಿದರು.
ಬಳಿಕ ಶೃಧ್ದಾ ಸಂದೇಶ್ ರೈ ಯೋಗಬ್ಯಾಸ ಮಾಡಿದರು.
ಸೋಮನಾಥ ದೇವಸ್ಥಾನ ವ್ಯವಸ್ಥಾಪಕರು ರವೀಂದ್ರ ರೈ, ಟ್ರಸ್ಟ್ ಸದಾನಂದ ಸುವರ್ಣ, ಸತೀಶ್ ಕುಂಪಾಲ ರವೀಂದ್ರನಾಥ, ಸದಾನಂದ ಸುವರ್ಣ, ದೀಪಕ್ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.