ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ: ದ.ಕ. ಜಿಲ್ಲಾ ಎನ್‌ಎಸ್ಯುಐ ಉಪಾಧ್ಯಕ್ಷರು ಸೇರಿ ಇಬ್ಬರು ಮೃತ್ಯು

ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ: ದ.ಕ. ಜಿಲ್ಲಾ ಎನ್‌ಎಸ್ಯುಐ ಉಪಾಧ್ಯಕ್ಷರು ಸೇರಿ ಇಬ್ಬರು ಮೃತ್ಯು


ಮಂಗಳೂರು: ರಾ.ಹೆ.66 ಜಪ್ಪಿನಮೊಗರು ಬಳಿ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಮೃತರನ್ನು ಕೊಂಚಾಡಿಯ ಓಂಶ್ರೀ (24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಓಂಶ್ರೀ ಅವರು ದ.ಕ. ಜಿಲ್ಲಾ ಎನ್‌ಎಸ್ಯುಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಾರಿನಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದು, ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.

ತಲಪಾಡಿ ಕಡೆಯಿಂದ ಪಂಪ್ವೆಲ್ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಟಲಿಯ ಪ್ರಜೆ ಸಹಿತ ಮೂವರಿಗೆ ಗಾಯಗಳಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article