ಕಾಂಗ್ರೆಸ್ ಆಡಳಿತ ವೈಫಲ್ಯ: ಜೆಡಿಎಸ್ ಪ್ರತಿಭಟನೆ

ಕಾಂಗ್ರೆಸ್ ಆಡಳಿತ ವೈಫಲ್ಯ: ಜೆಡಿಎಸ್ ಪ್ರತಿಭಟನೆ


ಮಂಗಳೂರು: ಜಿಲ್ಲಾ ಜನತಾ ದಳ (ಜಾ) ಪಕ್ಷದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಸಭೆಯನ್ನು ತಾಲ್ಲೂಕು ಕಚೇರಿ ಮುಂಭಾಗ ಕೈ ಗೊಳ್ಳಲಾಯಿತು. 

ಪಕ್ಷದ ರಾಜ್ಯ ವಕ್ತಾರ ಎಂ. ಬಿ. ಸದಾಶಿವ ಮಾತನಾಡಿ ಬಹುಮತದಿಂದ ಅಧಿಕಾರಕೆ  ಬಂದ ಕಾಂಗ್ರೆ?ಸ್ ಸರಕಾರ ಎರಡು ವರ್ಷಗಳಿಂದ ಅಧಿಕಾರದ ಮದದಲ್ಲಿ ಆಡಳಿತ ಚುಕ್ಕಾ?ಣಿ ಹಿಡಿದಿದೆ. ಇಡೀ ರಾಜ್ಯದ ಬೊಕ್ಕಸ ಖಾಲಿ ಮಾಡಿ ಜನಸಾಮಾನ್ಯರಿಗೆ ಅನಗತ್ಯ ಹೊರೆ ಹೊರಿಸಿ ಸಾಮಾನ್ಯ ಜನ ನೆಮ್ಮದಿಯಿಂದ ಬದುಕದಂತೆ ಮಾಡಿದೆ. ಯಾವುದೇ ಪಕ್ಷದ ಹಂಗಿಲ್ಲದೆ ಸರಕಾರ ಸ್ವಯಂ ಬಲದಿಂದ ಅಧಿಕಾರ ಮಾಡಿ ಜನಸಾಮಾನ್ಯರ ಬೇಡಿಕೆ ಈಡೇರಿಸಿ ನೆಮ್ಮದಿ ಬರಬಹುದೆಂಬ ನಿರೀಕ್ಷೆ? ಇತ್ತು. ಆದರೆ ಸರಕಾರ ಅಧಿಕಾರದ ಅಹಂಕಾರದಿಂದ ಎಲ್ಲ ವರ್ಗದ ಮೇಲೆ ಗದಾಪ್ರಹಾರ ನಡೆಸಲು ಆರಂಭಿಸಿತು. ವಾಲ್ಮೀಕಿ ನಿಗಮದ ದೊಡ್ಡ ಹಗರಣದಲ್ಲಿ ಶಾಸಕ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಕೈ ಬದಲಾಯಿತು ಎಂದು ರಾಜ್ಯವೇ ಬೆಚ್ಚಿ ಬೀಳಿತು .  ಅಧಿಕಾರ ಶಾಹಿಯನ್ನು ಬಳಸಿ ಅಧಿಕಾರದ ವ್ಯಕ್ತಿಗಳನ್ನು ಕೂಡ ಬಲಿಪಶು ಮಾಡಿ  ಹಣ ಸಂಗ್ರಹ ದಂಧೆಗೆ ಸರಕಾರ ತೊಡಗಿದ್ದಕ್ಕೆ  ಈ ಹಗರಣ ನಿದರ್ಶನವಾಯಿತು. ಹಗರಣದ ಸರಮಾಲೆಗಳೇ ಆರಂಭವಾದವು. ಅಹಿಂದ ಚಳವಳಿ ಹುಟ್ಟು ಹಾಕಿದ ಹಮ್ಮಿನಿಂದ ಮೆರೆಯುತ್ತಿರುವ ಸಿಎಂ ಸ್ವತಃ ಭೂ ಹಗರಣದಲ್ಲಿ ಸಿಲುಕಿಕೊಂಡರು ನಾಚಿಕೆಗೇಡು ಎಂದರು.

ರಾಜ್ಯಪ್ರಧಾನ ಕಾರ್ಯದರ್ಶಿ ವಿಟ್ಲ ಮಹಮ್ಮದ್ ಕುಂಞಿ, ಹೈದರ್ ಪರ್ತಿಪಾಡಿ ಮಾತನಾಡಿದರು.

ರಾಜ್ಯ ಪ್ರದಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಉಸ್ತುವಾರಿ ಪ್ರವೀಣ ಚಂದ್ರ ಜೈನ್, ಅಮರಶ್ರೀ ಅಮರನಾಥ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಕಡಬ ಮೀರಾಸಾಬ್, ಮೋಹನ್ ದಾಸ್ ಉಳ್ಳಾಲ, ಉಸ್ಮಾನ್ ಅಪ್ಸ, ಧನರಾಜ್, ಪುಷ್ಪರಾಜ, ಭಾರತಿ ಪುಷ್ಪರಾಜ, ಮಹಾವೀರ್ ಪುತ್ತೂರು, ವೀಣಾ ಶೆಟ್ಟಿ, ಚೂಡಾಮಣಿ, ವಿನ್ಸೆಂಟ್ ಸುರತ್ಕಲ್, ಕನಕದಾಸ, ರವೀಂದ್ರ ಉಳ್ಳಾಲ, ನಾಗೇಶ್, ಮುನೀರ್ ಮುಕ್ಕಛೇರಿ, ಬೆಂಗ್ರೆ ಹಮೀದ್, ಬೆಂಗ್ರೆ ಮಹಮ್ಮದ್, ಪುತ್ತುಮೋನು, ಸುಕುಮಾರ್ ಕೂಡ್ತಗೊಳಿ, ರಾಕೇಶ್ ಕುಂಟಿಕಾನ್, ಸಂಜೀವ ಮಡಿವಾಳ ಕಟೀಲ್, ನಝೀರ್ ಸಮನಿಗೆ, ಸುಮಿತ್ ಸುವರ್ಣ, ಧರ್ಮರಾಜ ಅಡ್ಕಾಡಿ ಮುಂತಾದ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಸ್ವಾಗತಿಸಿ, ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಮೂಲ್ಕಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article