.jpeg)
ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
Thursday, June 19, 2025
ಮಂಗಳೂರು: ಜಿಲ್ಲಾಡಳಿತ ಅಧಿಕಾರಿಗಳ ಸಭೆ ಡಗ್ಸ್ ಹಾವಳಿ ತಡೆಯ ಬಗ್ಗೆ ಸಭೆ ನಡೆದಿದೆ. ಮುಖ್ಯವಾಗಿ ವಿದ್ಯಾ ಸಂಸ್ಥೆ ಗಳನ್ನು ಸಂಪರ್ಕಿಸಿ ಅವರು ಈ ನಿಟ್ಟಿನಲ್ಲಿ ಕೈ ಜೋಡಿಸಲು ಸೂಚಿಸಲಾಗಿದೆ. ಡ್ರಗ್ಸ್ ಸರಬ ರಾಜು ಮಾಡುವವರ ವಿರುದ್ಧ ಕ್ರಮ, ನೋಡಲ್ ಅಧಿಕಾರಿಯನ್ನು ಪ್ರತಿ ವಿದ್ಯಾ ಸಂಸ್ಥೆಯಲ್ಲಿ ನೇಮಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರು ಯುವತಿಯರು ಈ ಜಾಲಕ್ಕೆ ಬಲಿ ಬೀಳದಂತೆ ಕ್ರಮ ಕೈಗೊಳ್ಳ ಲು ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ .ಡ್ರಗ್ಸ್ ತಡೆಗೆ ಕ್ರಮ ಜೂನ್ 26ರಂದು ಈ ಬಗ್ಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಮರಳು,ಕೆಂಪು ಕಲ್ಲು ಸಾಗಾಣಿಕೆಗೆ ಕಾನೂನು ಪ್ರಕಾರ ಇತರ ಜಿಲ್ಲೆಗಳಲ್ಲಿ ಇರುವ ಕಾನೂನು ಹಾಗೂ ಇಲ್ಲಿನ ಅವಕಾಶ ಗಳನ್ನು ಪರಿಶೀಲಿಸಿ ಪ್ರಸ್ತಾಪವನ್ನು ಸಲ್ಲಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮರಳುಗಾರಿಕೆಯ ಬಗ್ಗೆ ಸಿಆರ್ ಝೆಡ್ ನಿಯಮಗಳ ಮಿತಿಯಲ್ಲಿ ಪರಿಶೀಲಿಸಿ ಅನುಮತಿ ಪಡೆದು ಶೀಘ್ರ ವಾಗಿ ಸೂಕ್ತ ಕ್ರಮಗಳನ್ನು ಕಾನೂನು ಬದ್ಧವಾಗಿ ಕೈಗೊಳ್ಳಲು ಸೂಚಿಸಲಾಗಿದೆ ಈಗಾಗಲೇ ಕೆಲವು ಮರಳು ಬ್ಲಾಕ್ ಗುರುತಿಸಲಾಗಿದೆ ಎಂದಿದ್ದಾರೆ.