
ಡಾ. ತಾರಿಕಾ ಎಸ್. ಬಂಗೇರ ಅವರಿಗೆ ಪಿಹೆಚ್‌ಡಿ ಪದವಿ
Thursday, June 19, 2025
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ತಾರಿಕಾ ಎಸ್. ಬಂಗೇರ ಅವರ ‘ಕಂಪಾರೇಟಿವ್ ಫಾರ್ಮಾಸ್ಸಿಟಿಕೋ ಅನಾಲಿಟಿಕಲ್ ಮತ್ತು ಟೊಕ್ಸಿಕೊಲಾಜಿ ಕಲ್ ಸ್ಟಡೀ ಆಫ್ ರಜತ ಚಂದ್ರೋದಯ ಮತ್ತು ರಜತ ಸಿಂಧೂರ ವಿದ್ ಇಮ್ಯೂನೋಮೊಡ್ಯು ಲೇಟರೀ ಇಪೊಕ್ಟ್ ಅನ್ನುವ ಸಂಶೋಧನಾ ಪ್ರಬಂಧಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಎ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರೊ. ಡಾ. ಬಿ. ವಿನಯಚಂದ್ರ ಶೆಟ್ಟಿ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎಮ್.ಎಸ್. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಅವರು ಮೂಡುಬಿದಿರೆಯ ದಂತ ವೈದ್ಯರಾದ ಡಾ. ದೀಪಕ್ ಟಿ.ಎಸ್ ಇವರ ಧರ್ಮಪತ್ನಿ ಹಾಗೂ ಎಸ್.ಎ ಬಂಗೇರ ಅವರ ಹಾಗೂ ಶಾರದಾ ಬಂಗೇರ ದಂಪತಿಯ ಪುತ್ರಿ.